ಡೆಂಗ್ಯೂ ರೋಗ ತಡೆಗೆ ಸೊಳ್ಳೆ ಉತ್ಪತ್ತಿ ತಡೆಯೋಣ – ಸಾರ್ವಜನಿಕರಿಗೆ ಎಸ್.ಎಸ್ ಅಂಗಡಿ ಯವರಿಂದ ಕರೆ
ಅಮೀನಗಡ ಆ.19




ಹುನಗುಂದ ತಾಲೂಕಿನ ಅಮೀನಗಡದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಬಾಗಲಕೋಟ, ತಾಲೂಕಾ ಆರೋಗ್ಯ ಅಧಿಕಾರಿಗಳು ಹುನಗುಂದ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಅಮೀನಗಡ ಪಟ್ಟಣದ ಶ್ರೀ ದ್ಯಾಮವ್ವನ ಪಾದಗಟ್ಟಿಯಲ್ಲಿ “ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಸೋಲಿಸಲು ನೀರಿನ ಸಂಗ್ರಹಗಳ ಪರೀಶೀಲನೆ, ಸ್ವಚ್ಛ ಗೊಳಿಸುವುದು, ಮುಚ್ಚಿಡಿವುದು ಎಂಬ ಘೋಷ ವಾಕ್ಯಯೊಂದಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವವು, ಡೆಂಗ್ಯೂ ಚಿಕೂನ್ ಗುನ್ಯಾ ರೋಗವು “ಈಡಿಸ್ ಈಜಿಪ್ತೆ” ಸೊಳ್ಳೆಗಳು ಸಂಗ್ರಹಿಸಿದ ಸ್ವಚ್ಛವಾದ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವುದು, ಮನೆ ಸುತ್ತ ಮುತ್ತ ಟೆಂಗಿನ ಚಿಪ್ಪು, ಒಡೆದ ಬಾಟಲ್, ಟಾಯರ್ ಟ್ಯೂಬ್, ಕೂಲರ್ ಫ್ರೀಜ್ ನೀರಿನ ಸಂಗ್ರಹ ಸ್ವಚ್ಚ ಗೊಳಿಸಿ, ಲಾರ್ವಾ ಉತ್ಪತ್ತಿ ತಡೆಯಬೇಕು, ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ನಿಶ್ಯಕ್ತಿ ವಿಪರೀತ ಜ್ವರ, ತಲೆ ನೋವು, ಯಾವುದೇ ತರಹ ಜ್ವರ ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರದ ಸರಕಾರಿ ಆಸ್ಪತ್ರೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಸಲಹೆ ಪಡೆಯಬೇಕು, ಕುಟುಂಬದ ಸದಸ್ಯರು ಡೆಂಗ್ಯೂ ರೋಗ ತಡೆಗೆ ಸಹಕರಿಸ ಬೇಕು ಆರೋಗ್ಯ ಸಮಸ್ಯೆಗಳಿದ್ದವರ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹಿಸಲಾಯಿತು. ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾಚರಣೆ ಜಾಗೃತಿ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪಟ್ಟಣದ ವಾರ್ಡ 7 ರ ನಿವಾಸಿಗರಾದ ಸಂಗಪ್ಪ ಭೀಮಪ್ಪ ಜಲ್ಲಿ, ಮಂಜುನಾಥ ಶಿ ಬೇನಾಳ, ಮಾರುತಿ ನಿಂಗಪ್ಪ ಕತ್ತಿ, ಶ್ರೀಧರ ಬಜೆಂತ್ರಿ, ಪರಸಪ್ಪ ಕಿತ್ತಲಿ ಹನಮಂತ ವಿಠ್ಠಲ ಚಿತ್ರಗಾರ, ಯಮನಪ್ಪ ಛಬ್ಬಿ, ಯಲ್ಲಪ್ಪ ಜಡಿ, ಮಂಜುನಾಥ ಬಸಪ್ಪ ಬೀಳಗಿ, ಸೋಮಪ್ಪ ಯಲ್ಲಪ್ಪ ಮುಖಂಡರು, ಯುವಕರು ಭಾಗವಹಿಸಿದ್ದರು.