ಜಿಮ್ ಅಭ್ಯಾಸ ದೈಹಿಕ ಆರೋಗ್ಯ ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ – ಬಸವರಾಜ.ಹೊಸಳ್ಳಿ.
ರೋಣ ಆ.15

ಜಿಮ್ ಹೋಗುವುದರಿಂದ ಅನೇಕ ಪ್ರಯೋಜನಗಳಿವೆ. ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ತೂಕವನ್ನು ಕಳೆದು ಕೊಳ್ಳಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೂ ಇದು ಒಳ್ಳೆಯದು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಇದು ನಿಮ್ಮ ಮೂಡ್ ಅನ್ನು ಸುಧಾರಿಸುತ್ತದೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಈ ಜಿಮ್ ತೆರೆಯಲು ಶಾಸಕರಾದ ಜಿ.ಎಸ್ ಪಾಟೀಲ್ ರವರು ನಮಗೆ 25 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಗೊಳಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸ ಬೇಕು ಎಂದು ವ್ಯಾಯಾಮ ಶಾಲೆಯ ಮೇಲ್ವಿಚಾರಕರಾದ ಬಸವರಾಜ ಹೊಸಳ್ಳಿ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ರೋಣ ನಗರದ ಶಹರದಲ್ಲಿ 79 ನೇ. ಸ್ವಾತಂತ್ರ್ಯೋತ್ಸವ ದಿನಾಚರಣೆಯ ದಿನ ದ್ರೋಣಚಾರ್ಯ ಕ್ರೀಡಾಂಗಣದಲ್ಲಿ ವ್ಯಾಯಾಮ ಶಾಲೆ ಉದ್ಘಾಟನಾ ಕಾರ್ಯಕ್ರಮ ಜರುಗಿತು.ಈ ಸಮಯದಲ್ಲಿ ಈ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಜಿ.ಎಸ್ ಪಾಟೀಲ್ ನೆರವೇರಿಸಿದರು. ಹಾಗೂ ವ್ಯಾಯಾಮ ಮಂದಿರದ ಉಪಕರಣಗಳನ್ನು ರೋಣ ಶಾಸಕ ಜಿ.ಎಸ್ ಪಾಟೀಲ್ ಹಾಗೂ ರೋಣ ಪುರ ಸಭೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪೂಜಾ ಕಾರ್ಯಕ್ರಮದ ನಂತರ ಶಾಸಕರ ಜಿ.ಎಸ್ ಪಾಟೀಲ್ ಹಾಗೂ ಪುರ ಸಭೆ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವ್ಯಾಯಾಮ ಶಾಲೆಯ ಎಲ್ಲ ಉಪಕರಣಗಳನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ರೋಣ ಪುರ ಸಭೆ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಬಸಪ್ಪ ಕೊಪ್ಪದ ಉಪಾಧ್ಯಕ್ಷರಾದ ಹನುಮಂತಪ್ಪ ತಳ್ಳಿಕೇರಿ, ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ್, ಅಕ್ಷಯ್ ಪಾಟೀಲ್, ರೋಣ ಸಿಪಿಐ ಶಿವಾನಂದ ಬೀಳಗಿ, ಪಿಎಸ್ಐ ಪ್ರಕಾಶ್ ಬಣಕಾರ್, ಮಲ್ಲಯ್ಯ ಮಹಾ ಪುರುಷಮಠ, ಮಿಥುನ್.ಜಿ ಪಾಟೀಲ್, ದುರಗಪ್ಪ ಹಿರೇಮನಿ, ಮಲ್ಲಿಕಾರ್ಜುನ ಹಣಸಿ, ಸಂಗಮೇಶ, ನವಲಗುಂದ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ