ಹತ್ತು ಸಾವಿರ ನಿವೇಶನಗಳನ್ನು ವಿತರಿಸಲಾಗುವುದು – ಶಾಸಕ ಜಿ.ಹೆಚ್ ಶ್ರೀನಿವಾಸ್.
ತರೀಕೆರೆ ಆ .15

ಅಭಿವೃದ್ಧಿಯಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ 90 ಪರ್ಸೆಂಟ್ ನಾವು ಮುಂದೆ ಬಂದಿದ್ದೇವೆ. ಎಂದು ಶಾಸಕರಾದ ಜಿ.ಎಚ್ ಶ್ರೀನಿವಾಸ್ ರವರು ಹೇಳಿದರು. ಅವರು ಇಂದು ಬಯಲು ರಂಗ ಮಂದಿರದಲ್ಲಿ ನಾಡ ಹಬ್ಬಗಳ ಸಮಿತಿ ಏರ್ಪಡಿಸಿದ್ದ ಸ್ವತಂತ್ರೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನ್ಯ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ನವರು ಯಶಸ್ವಿಯಾಗಿ ಪಂಚ ಭಾಗ್ಯಗಳನ್ನು ನಿರ್ವಹಿಸಿದ್ದಾರೆ ಅವರು ಉತ್ತಮ ಆರ್ಥಿಕ ತಜ್ಞರು ಹೌದು ಎಂದು ಹೇಳಿದರು. ತರೀಕೆರೆಯ ಅಭಿವೃದ್ಧಿಗೆ 50 ಕೋಟಿ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದಾರೆ. ಕಂದಾಯ ಗ್ರಾಮಗಳನ್ನು ರಚಿಸ ಬೇಕು ಮತ್ತು ನಿವೇಶನ ರೈತರಿಗೆ 10,000 ಜನರಿಗೆ ನಿವೇಶನ ನೀಡಲಾಗುವುದು ಎಂದು ಹೇಳಿದರು. 8.5 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಪಡಿಸಲಾಗುವುದು ಮತ್ತು ಎಂಟು ಕೋಟಿ ಅನುದಾನದಲ್ಲಿ ಪುರ ಸಭೆ ಕಟ್ಟಡ ನಿರ್ಮಾಣ ಮತ್ತು ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು ತರೀಕೆರೆ ಪಟ್ಟಣದಲ್ಲಿ ಚತುರ್ಪಥ್ ರಸ್ತೆ ನಿರ್ಮಾಣಕ್ಕೆ ಮತ್ತೆ ಒಂದು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸ್ವತಂತ್ರ ಪಡೆಯಲು ಗಾಂಧೀಜಿ ಮುಂತಾದ ರಾಷ್ಟ್ರ ನಾಯಕರು ಹೋರಾಟದ ಫಲ ಸ್ವಾತಂತ್ರ್ಯ ಲಭಿಸಿದೆ ನಮ್ಮ ತರೀಕೆರೆಯಲ್ಲಿ ಹಂಜಿ ವೀರಪ್ಪ, ಹಂಜಿ ಶಿವಣ್ಣ ಅಜ್ಜಂಪುರದಲ್ಲಿ ಸತ್ಯನಾರಾಯಣ ಶ್ರೇಷ್ಠ ಮುಂತಾದವರು ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು.
ಇಂದು ಸಂಗೊಳ್ಳಿ ರಾಯಣ್ಣ ರವರ ಜನ್ಮ ದಿನವನ್ನು ಸಹ ನಾವು ಆಚರಣೆ ಮಾಡಿದ್ದೇವೆ. ಮಕ್ಕಳು ದೊಡ್ಡ ದೊಡ್ಡ ಗುರಿಗಳನ್ನು ಕನಸುಗಳನ್ನು ಕಾಣಬೇಕು ಗುರಿಯನ್ನು ಸಾಧಿಸಬೇಕು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ಕೊಟ್ಟರು. ರಾಷ್ಟ್ರ ಧ್ವಜಾರೋಹಣ ಮಾಡಿದ ಮಾನ್ಯ ಉಪ ವಿಭಾಗ ಅಧಿಕಾರಿಗಳಾದ ಎನ್. ವಿ ನಟೇಶ್ ಸ್ವತಂತ್ರೋತ್ಸವದ ಸಂದೇಶ ನೀಡುತ್ತಾ. ಈ ದೇಶದ ಗೌರವಾನ್ವಿತ ಸ್ವತಂತ್ರ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಬಾಲಗಂಗಾಧರ ತಿಲಕ್, ವಲ್ಲಭಾಯ್ ಪಟೇಲ್, ಅಂಬೇಡ್ಕರ್ ಮುಂತಾದವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸ ಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಿ ಮತ್ತು ಬಹುಮಾನ ವಿತರಣೆ ಮಾಡಲಾಯಿತು . ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸದ್ವಿದ್ಯಾ ಶಾಲೆಯ ಮಕ್ಕಳಿಂದ ನಾಡಿನ ಸೈನಿಕರ ನೃತ್ಯ ರೂಪಕವನ್ನು ಮೆಚ್ಚಿ ಮಾಜಿ ಸೈನಿಕರ ಸಂಘದ ಮಿಲ್ಟ್ರಿ ಶ್ರೀನಿವಾಸ್, ದೇವೇಂದ್ರ ಎಸ್ ಹೆಚ್ ಕುಮಾರ್, ರವರು ಬಹುಮಾನ ವಿತರಿಸಿದರು. ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ತರೀಕೆರೆಯ ವಾರ್ಡ್ ನಂಬರ್ 23 ರ ಸದಸ್ಯರು ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಪಾರ್ವತಮ್ಮ ತಿಮ್ಮಯ್ಯ ರವರು ಬಾಪೂಜಿ ಕಾಲೋನಿಯ 41 ಜನ ಮನೆ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಿ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಈ ಸಂದರ್ಭದಲ್ಲಿ ಪುರ ಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ಹಾಗೂ ಶಾಸಕರಾದ ಜಿ.ಎಚ್ ಶ್ರೀನಿವಾಸ್ ಮತ್ತು ಉಪಾಧ್ಯಕ್ಷರಾದ ಪಾರ್ವತಮ್ಮ ತಿಮ್ಮಯ್ಯ ರವರಿಗೆ ಬಾಪೂಜಿ ಕಾಲೋನಿಯ ಸಾರ್ವಜನಿಕರಿಂದ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತಹಸಿಲ್ದಾರ್ ವಿಶ್ವಜಿತ್ ಮೆಹ್ತಾ ಸ್ವಾಗತಿಸಿದರು, ವೇದಿಕೆಯಲ್ಲಿ ಪೊಲೀಸು ಉಪ ಅಧೀಕ್ಷಕರಾದ ಹಾಲುಮೂರ್ತಿ ರಾವ್ ವಿ ಎಸ್, ಕಾರ್ಯ ನಿರ್ವಹಣಾಧಿಕಾರಿ ಡಾ. ಆರ್ ದೇವೇಂದ್ರಪ್ಪ, ಪುರ ಸಭಾ ಮುಖ್ಯ ಅಧಿಕಾರಿ ಟಿಒ ವಿಜಯ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್ಎ, ಹಾಗೂ ನೌಕರರ ಸಂಘದ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು