ಬಲಗೈ ಸಮುದಾಯದಿಂದ ಪ್ರತಿಭಟನೆ ಎಚ್.ಎನ್ ನಾಗಮೋಹನ್ ದಾಸ್ ವರದಿ – ತಿರಸ್ಕರಿಸಲು ಆಗ್ರಹ.

ಮುದ್ದೇಬಿಹಾಳ ಆ.15

ಕುಲ ಶಾಸ್ತ್ರೀಯ ಅಧ್ಯಯನದ ಕೊರತೆ ಬಲಗೈ ಸಮುದಾಯದ ವಿರುದ್ಧ ದ್ವೇಷ ಪೂರಿತ ನಿರ್ಧಾರವಾಗಿರುವ ಒಳ ಮೀಸಲಾತಿ ಕೊಡುವ ಹಿನ್ನೆಲೆಯಲ್ಲಿ ನ್ಯಾ. ನಾಗ ಮೋಹನ್ ದಾಸ ನೀಡಿರುವ ವರದಿಯನ್ನು ಸರ್ಕಾರ ಅಂಗೀಕರಿಸ ಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ತಾಲೂಕು ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಆರಂಭ ಗೊಂಡ ಪ್ರತಿಭಟನೆ ಸಂಗೊಳ್ಳಿ ರಾಯಣ್ಣ ವೃತ್ತ. ಬಸವೇಶ್ವರ ವೃತ್ತ. ತಹಶೀಲ್ದಾರ್ ಕಚೇರಿಗೆ ಆಗಮಿಸಿತು. ಮುಖಂಡ ಹರೀಶ್ ನಾಟಿಕರ್. ಚೆನ್ನಪ್ಪ ವಿಜೇಕರ್. ಮಾತನಾಡಿ. ನಗರ ಮತ್ತು ಗ್ರಾಮ ಪಂಚಾಯತದಲ್ಲಿ ಭೂತ್ ತೆರೆಯದೆ ಮನೆಗಳಿಗೆ ಚೀಟಿ ಅಚೀಟಿಸುವ ಮೂಲಕ ಸಮೀಕ್ಷೆ ಪೂರ್ಣವಾಗಿದೆ ಎಂದು ತಪ್ಪು ವರದಿ ನೀಡಲಾಗಿದ್ದು. ಇದರಲ್ಲಿ 1.47 ಕೋಟಿ ಬದಲು 1.16. ಕೋಟಿ ಜನರ ವರದಿ ಸಲ್ಲಿಕೆ ಯಾಗಿದೆ. ಅದರಲ್ಲಿ ಆಯೋಗವು 1.05. ಕೋಟಿ ಮಾತ್ರ ಸರ್ವೇ ಮಾಡಿದೆ. 40 ಲಕ್ಷ ಜನರು ಸಮೀಕ್ಷೆಯಿಂದ ಹೊರ ಗೂಳಿದಿದ್ದಾರೆ ಎಂದು ದೂರಿದರು. ಕೆಲವು ಬಲಗೈ ಜಾತಿಗಳನ್ನು ತಪ್ಪಾಗಿ ಪ್ರವರ್ಗ-ಎ ಗೆ ಸೇರಿಸಲಾಗಿದ್ದು. ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಹೊಡೆದು ತೋರಿಸಲಾಗಿದೆ ಎಂದು ದೂರಿದರು. ಆ ವೈಜ್ಞಾನಿಕ ವಾಗಿರುವ ನಾಗಮೋಹನ್ ದಾಸ್ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಹೊಲೆಯ ಹಾಗೂ ಮಾದಿಗ ಸಮುದಾಯ ಒಂದೇ ಜೋಡೆತ್ತು ಇದ್ದಂತೆ ಇಬ್ಬರು ಸಮುದಾಯದ ವರಿಗೂ ಸಮಾನ ನ್ಯಾಯ ದೊರಕಿಸಿ ಕೊಡುವ ಕಾರ್ಯ ವರದಿಯಿಂದ ಆಗಬೇಕಿತ್ತು ಎಂದು ಹೇಳಿದರು. ತಹಶೀಲ್ದಾರ್ ಕೀರ್ತಿ ಚಾಲಕ್. ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಪ್ರೊ, ಪಿ.ಹೆಚ್ ಉಪಲದಿನ್ನಿ. ಮುಖಂಡರಾದ ಸಿದ್ದು ಕಟ್ಟಿಮನಿ. ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ್. ಎಸ್.ಆರ್ ಕಟ್ಟಿಮನಿ. ಅಶೋಕ್ ಪಾದಗಟ್ಟಿ. ಶಿವಪುತ್ರ ಅಜ್ಮನಿ. ಪ್ರಕಾಶ್ ಚಲವಾದಿ ಮಾತನಾಡಿದರು. ಪುರಸಭೆ ಸದಸ್ಯ ಶಿವು. ಶಿವಪುರ. ಚಲವಾದಿ. ಮಹಾಸಭೆ ತಾಲೂಕು ಅಧ್ಯಕ್ಷ ರೇವಣಪ್ಪ ಹರಿಜನ್ .ಎಲ್ಲಪ್ಪ ಚಲವಾದಿ .ಮಹಾಂತೇಶ್ ಚಲವಾದಿ. ಕೆ.ಎಂ. ಇಬ್ರಾಹಿಂಪುರ್. ಶ್ರೀಕಾಂತ್ ಚಲವಾದಿ. ಶರಣು ಚಲವಾದಿ. ಸಂಗು ಚಲವಾದಿ. ಸಿದ್ದು ಚಲವಾದಿ. ಮಂಜುನಾಥ್ ಬಸರ್ ಕೋಡ್. ಹನುಮಂತ್ ಗುಂಡಕರ್ಜಗಿ. ಶಿವಪ್ಪ ಗುಂಡಕರ್ಜಗಿ. ಪ್ರಕಾಶ್ ಗುಂಡಕರ್ಜಗಿ. ಪ್ರಶಾಂತ್ ಕಾಳೆ. ಮಂಜುನಾಥ್ ಕಟ್ಟಿಮನಿ. ದೇವರಾಜ್ ಹಂಗರಗಿ. ಎಚ್. ಆರ್. ಗಂಜಾಳ್. ಇನ್ನೂ ಎಲ್ಲಾ ಗ್ರಾಮದ ಮುಖಂಡರು ಇದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button