ಜಿ.ಕೆ ಕ್ರಾಸ್ ನಲ್ಲಿರುವ ವಿದ್ಯಾ ಸಾಗರ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು – ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಆನಗೋಡು ಆ.16


ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಆನಗೋಡ ಹೋಬಳಿಯ ಸಮೀಪದ ಇಂದು ಜಿ.ಕೆ ಕ್ರಾಸ್ ನಲ್ಲಿರುವ ವಿದ್ಯಾ ಸಾಗರ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತಾಧಿಕಾರಿಯಾದ ಶ್ರೀಮತಿ ರಾಜೇಶ್ವರಿ ಚಿದಾನಂದ್ ರವರು ವಹಿಸಿದ್ದರು. ಹಾಗೂ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಾನಪದ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಅಕಾಡೆಮಿ ಪ್ರಶಸ್ತಿ ಹಾಗೂ ಮುಂತಾದ ಪ್ರಶಸ್ತಿಗಳ ವಿಜೇತರಾದಂತಹ ಶ್ರೀಯುತ ಉಮೇಶ್ ನಾಯಕ್ ಅವರು ಉಪಸ್ಥಿತರಿದ್ದರು.



ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ವಿದ್ಯಾ ಸಾಗರ ಶಾಲೆಯ ಶಿಕ್ಷಕಿಯಾದ ಕುಮಾರಿ ಅಂಜಲಿಯವರು ನಡೆಸಿ ಕೊಟ್ಟರು. ಹಾಗೂ ನಿರೂಪಣೆ ಕಾರ್ಯಕ್ರಮವನ್ನು ಶಾಲೆಯ ಮುದ್ದು ಮಕ್ಕಳೇ ಅತಿ ಸುಂದರವಾಗಿ ನಡೆಸಿ ಕೊಟ್ಟರು. ಈ ಒಂದು ಕಾರ್ಯಕ್ರಮದಲ್ಲಿ ಪ್ರತಿ ತರಗತಿಯ ಮಕ್ಕಳು ಭಾರತೀಯ ಸ್ವಾತಂತ್ರ್ಯತೆಯನ್ನು ಸಾರುತ್ತಾ ಭಾಷಣವನ್ನು ಮಾಡಿದರು. ಹಾಗೂ ನಮ್ಮ ದೇಶದ ಸೈನಿಕರಿಗೆ ನೃತ್ಯದ ಮೂಲಕ ನಮನವನ್ನು ಸಲ್ಲಿಸಿದರು ಎಂದು ವರದಿಯಾಗಿದೆ.