ಸ್ವಾತಂತ್ರ್ಯದ ಸಂಭ್ರಮ ಮಾತ್ರವಲ್ಲದೆ ದೇಶದ ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿದೆ – ಸಿ.ಬಿ ಪೊಲೀಸ್ ಪಾಟೀಲ್.
ರೋಣ ಆ .16

ಸ್ವಾತಂತ್ರ್ಯ ಸಿಗುವ ಪೂರ್ವದಲ್ಲಿ ಬ್ರಿಟಿಷ್ ರು ಹಾಗೂ ಬೇರೆ ಬೇರೆ ರಾಷ್ಟ್ರಗಳು ನಮ್ಮ ದೇಶಕ್ಕೆ ಸಾಂಬಾರ ಪದಾರ್ಥಗಳಿಗಾಗಿ ಬಂದು, ಸ್ಥಳಿಯ ಸಂಸ್ಥಾನ ರಾಜರುಗಳ ಒಳ ಆಡಳಿತ ವಿಭಜನೆ ಮಾಡಿ, ನಮ್ಮ ದೇಶದಲ್ಲಿನ ಸಮೃದ್ಧಿ, ಸಂಪತ್ತನ್ನು ಲೂಟಿ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ವಿದೇಶಿಯರ ಭಾರತದ ಸಂಪತ್ತು ದೋಚಿದ ಪರಿಣಾಮವಾಗಿ ಬಡ ರಾಷ್ಟ್ರ ಎನಿಸಿಕೊಂಡ ಭಾರತ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಿ, ವಿಶ್ವ ಗುರುವಿನ ಸ್ಥಾನದತ್ತ ಮುನ್ನಡೆ ಯುತ್ತಿರುವುದು ನಮಗೆಲ್ಲ ಸಂತಸದ ವಿಷಯವಾಗಿದೆ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ದೇಶಾದ್ಯಂತ ರಾಷ್ಟ್ರೀಯತೆ ಮತ್ತು ದೇಶ ಭಕ್ತಿಯ ಭಾವನೆಯೊಂದಿಗೆ ಭಾರತೀಯರು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಈ ದಿನದಂದು ಪ್ರತಿಯೊಬ್ಬ ನಾಗರಿಕನು ಹಬ್ಬದ ಭಾವನೆ ಮತ್ತು ಜನರ ವೈವಿಧ್ಯತೆ ಮತ್ತು ಏಕತೆಯಲ್ಲಿ ಹೆಮ್ಮೆಯಿಂದ ಪ್ರತಿಧ್ವನಿಸುತ್ತಾನೆ. ಇದು ಸ್ವಾತಂತ್ರ್ಯದ ಸಂಭ್ರಮ ಮಾತ್ರವಲ್ಲದೆ ದೇಶದ ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿದೆ ಎಂದು ಕೆ.ಎಸ್.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್ ರವರು ಮಾತನಾಡಿದರುಈ ಕಾರ್ಯಕ್ರಮ ರೋಣ ನಗರದ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಾದ ಕೆ.ಎಸ್.ಎಸ್ ಪದವಿ ಹಾಗೂ ಶ್ರೀ ಶರಣಬಸವೇಶ್ವರ ಪದವಿ ಪೂರ್ವ ಹಾಗೂ ಪ್ರೌಢ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯೋತ್ಸವದ ಆಚರಣೆಯು ಅದ್ದೂರಿಯಾಗಿ ನಡೆಯಿತು. ಪ್ರಾರಂಭದಲ್ಲಿ ಸ್ಥಾನಿಕ ಮುಖ್ಯಸ್ಥರಾದ ಐ.ಬಿ ದಂಡಿನರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.ಶ್ರೀ ಶರಣಬಸವೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಪಥ ಸಂಚಲನ ಕಾರ್ಯಕ್ರಮ ನಡೆಯಿತು ಈ ಸಮಯದಲ್ಲಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಶರಣಬಸವೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪನ್ಯಾಸಕ ಬಳಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ