“ಸಭ್ಯತೆಯೇ ಭವ್ಯತೆ”…..

ನಗುವಿಗೆ ನೋವು ಮರೆ
ಶುಭ ಘಳಿಗೆ ಹರುಷ ತರುತ್ತೆ
ಬೇಜಾರು ನರಕ ಸಮಾನ
ಸುಖದ ಕ್ಷಣವು ಇಳಿಜಾರು ಸರಾಗ
ಬಾಲ್ಯದಲಿ ಅರಿವಿನ ಶೆಲೆ
ಯೌವನದಲಿ ಬಾಳುವ ಕಲೆ
ದುಡಿಮೆಯ ಹಣದಲಿ ಉಳಿಕೆಗೆ ಬೆಲೆ
ಮುಪ್ಪಿನಲಿ ಸುಮ್ಮನೆ ವೇಳೆಯ ಕಳೆ
ಅರಿತು ಪ್ರಶ್ನೆ ಮಾಡಿದರೆ ನಿಜ ತಿಳಿಯುತ್ತೆ
ಆಕಸ್ಮಿಕ ಬಂದದ್ದು ನಡು ಬೀದಿಯಲಿ
ನಿಲ್ಲುಸುತ್ತೆ
ಗೌರವ ಕೊಡುವವಂಗೆ ಗೌರವ ಲಭ್ಯತೆ
ಸಂಸ್ಕಾರ ಸಂಸ್ಕೃತಿ ನಮ್ಮೆಲ್ಲರ ಸಭ್ಯತೆಯೇ
ಭವ್ಯತೆ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ