ಯೂರಿಯಾ ರಸ ಗೊಬ್ಬರಕ್ಕಾಗಿ – ಮುಗಿಬಿದ್ದ ರೈತರು.
ಕೂಡ್ಲಿಗಿ ಆ.16

ರಾಜ್ಯದ ಹಲವೆಡೆ ರೈತರು ಯೂರಿಯಾ ರಸ ಗೊಬ್ಬರ ಪಡೆಯುವ ಸಲುವಾಗಿ ದಿನ ನಿತ್ಯ ರಸ ಗೊಬ್ಬರ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತು ಹರ ಸಾಹಸ ಪಡುತ್ತಿರುವ ದೃಶ್ಯ ಇನ್ನೂ ನಿಂತಿಲ್ಲಾ, ಈ ವಿಷಯ ಕುರಿತು ವಿಧಾನ ಸಭೆಯಲ್ಲಿ ಚರ್ಚೆ ಆಗುತ್ತಿದ್ದು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವಲ್ಲಿ ವೃತಾ ಕಾಲಹರಣ ಮಾಡುತ್ತಿರುವುದು ವಿಪರ್ಯಾಸವೇ ಸರಿ.ಇದಕ್ಕೆ ಸಾಕ್ಷಿ ಎನ್ನುವಂತೆ ವಿಜಯನಗರ ಜಿಲ್ಲೆ, ಕೂಡ್ಲಿಗಿ ಪಟ್ಟಣದ ಪೊಲೀಸ್ ಅಧೀಕ್ಷಕರ ಕಚೇರಿ ಪಕ್ಕದಲ್ಲಿರುವ ಶ್ರೀನಿವಾಸ ಟ್ರೇಡರ್ಸ್ ಗೊಬ್ಬರದ ಅಂಗಡಿಗೆ ಗುರುವಾರ ಬೆಳ್ಳಂ ಬೆಳಗ್ಗೆಯಿಂದಲೇ ಯೂರಿಯಾ ರಸ ಗೊಬ್ಬರ ಪಡೆಯಲು ಸಾವಿರಾರು ರೈತರು ಸುಮಾರು 200 ಮೀಟರ್ ದೂರದ ವರೆಗೆ ಸಾಲುಗಟ್ಟಿ ನಿಂತು ಅಂಗಡಿಗೆ ಮುಗಿ ಬಿದ್ದಿದ್ದು ಕಂಡು ಬಂತು. ಅಂಗಡಿಯ ಮಾಲೀಕರು ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಧಾರ್ ಕಾರ್ಡ್ ವುಳ್ಳ ಪ್ರತಿಯೊಬ್ಬ ರೈತರಿಗೆ ತಲಾ ಎರಡು ಚೀಲ ಯೂರಿಯಾ ರಸ ಗೊಬ್ಬರವನ್ನ ವಿತರಿಸಿದರು.

ಈ ಸಂದರ್ಭದಲ್ಲಿ ಕೆಲವು ರೈತರು ತಮ್ಮ ಅಳಲನ್ನು ತೋಡಿಕೊಂಡು ತಮ್ಮ ದಿನ ನಿತ್ಯದ ಕೆಲಸಗಳೆಲ್ಲ ಬಿಟ್ಟು ಗೊಬ್ಬರಕ್ಕಾಗಿ ಅಲೆದಾಡುವ ದುಸ್ಥಿತಿ ನಮಗೆ ಬಂದಿದೆ ಎಂದು ತಮಗಾದ ತೊಂದರೆಗಳನ್ನು ಹೇಳುತ್ತಾ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಿಡೀ ಶಾಪ ಹಾಕುತ್ತಿರುವುದು ಕಂಡು ಬಂದಿತು. ಶಾಸಕರು ಈ ಬಗ್ಗೆ ತಕ್ಷಣ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ