ಒಳ ಮೀಸಲಾತಿ ಜಾರಿಗಾಗಿ ಚಲನ ಶೀಲತೆ ವೇಗ ಹೆಚ್ಚಿಸಲು ಯುವ ಪೀಳಿಗೆಗೆ – ಡಿ.ಎಸ್.ಎಸ್ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಕರೆ.
ಬೆಂಗಳೂರು ಆ.17
ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ.) Regd. No. DRB2/SOR/2/2025-2026 ಸಂಘಟನೆ ಯಿಂದ ದಿನಾಂಕ 16.08.2025 ರಂದು ಸುಳ್ಳು ಭರವಸೆ ಸಾಕು ಒಳ ಮೀಸಲಾತಿ ಈ ಕೂಡಲೇ ಜಾರಿ ಗೊಳಿಸಿ ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ. ಅನಿರ್ದಿಷ್ಟಾವಧಿ ಆಹೋರಾತ್ರಿ ಪ್ರತಿಭಟನೆಯಲ್ಲಿ ತರೀಕೆರೆ.ಎನ್ ವೆಂಕಟೇಶ್ ಅವರ ನೇತೃತ್ವದಲ್ಲಿ ಭಾಗವಹಿಸಿ ಒಳ ಮೀಸಲಾತಿಯನ್ನು ಈ ಕೂಡಲೇ ಜಾರಿ ಗೊಳಿಸಿ ರಾಜ್ಯ ಸರ್ಕಾರವನ್ನು ಒತ್ತಾಯ ಪಡಿಸಲಾಯಿತು. ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ಜಾರಿಗಾಗಿ ಚಲನ ಶೀಲತೆ ವೇಗ ಹೆಚ್ಚಿಸಲು ಯುವ ಪೀಳಿಗೆಗೆ ರಾಜ್ಯ ಡಿ.ಎಸ್.ಎಸ್ ಸಂಚಾಲಕ ತರೀಕೆರಿ.ಎನ್ ವೆಂಕಟೇಶ್ ಅವರು ಕರೆ ನೀಡಿದ್ದಾರೆ.

ಅವರು ಮಾತನಾಡುತ್ತಾ ಸುಮಾರು 35 ವರ್ಷಗಳಿಂದ ಇಲ್ಲಿಯ ವರೆಗೂ ಶೋಷಿತ ಸಮುದಾಯಗಳು ಒಳ ಮೀಸಲಾತಿಯನ್ನು ಜಾರಿ ಗೊಳಿಸಿ ಎಂದು ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತೇವೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬಂದರೂ ಇಲ್ಲಿ ವರೆಗೂ ಸಹ ಒಳ ಮೀಸಲಾತಿಯನ್ನು ಜಾರಿ ಗೊಳಿಸಲು ಆಗುತ್ತಿಲ್ಲ ಹಾಗಾಗಿ ಈ ಕೂಡಲೇ ಒಳ ಮೀಸಲಾತಿಯನ್ನು ಜಾರಿ ಗೊಳಿಸಬೇಕು ಎಂದು ಒತ್ತಾಯ ಪಡಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನೆ ಸಂಚಾಲಕರಾದಂತ ದುರ್ಗಾ.ದಾಸ ಪಿ ವಿಜಯನಗರ ಜಿಲ್ಲಾ ಹಾಗೂ ಸಂಘಟನೆಯ ರಾಜ್ಯ ಖಜಂಚಿ ಮಹಾದೇವ ಪ್ರಸಾದ್ ಮೈಸೂರು, ಆದಿ ನಾರಾಯಣ ಬೆಂಗಳೂರು, ರಾಜಶೇಖರ್ ಜಾಪನೂರ್ ಗುಲ್ಬರ್ಗ, ಹಾಗೂ ಸಂಘಟನೆಯ ಹಲವಾರು ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ಸೂಚಿಸಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ.ಚಿಕ್ಕಮಗಳೂರು