ಪ.ಪಂ ಅಧ್ಯಕ್ಷರಾದ ಬದ್ದಿ.ರೇಖಾ ರಮೇಶ್ ಕೊಟ್ಟೂರು ಕೆರೆಗೆ ಒಂದೇ ವರ್ಷದಲ್ಲಿ – ಎರಡು ಬಾರಿ ಬಾಗಿನ ಅರ್ಪಣೆ.
ಕೊಟ್ಟೂರು ಆ.17

ವಿಜಯನಗರ ಜಿಲ್ಲೆಯ ಐತಿಹಾಸಿಕ ಪುಣ್ಯ ಕ್ಷೇತ್ರ ಕೊಟ್ಟೂರು ಕೆರೆ ತುಂಬಿರುವ ಸಂಭ್ರಮದಲ್ಲಿ ದಿನಾಂಕ ಆಗಸ್ಟ್ 16 ಶನಿವಾರ ದಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಬದ್ದಿ.ರೇಖಾ ರಮೇಶ್ ರವರು ಕೊಟ್ಟೂರು ಕೆರೆಗೆ ಬಾಗಿನ ಅರ್ಪಿಸಿದರು. ಬದ್ದಿ.ರೇಖಾ ರಮೇಶ್ ಪಂಚಾಯಿತಿ ಅಧ್ಯಕ್ಷರಾಗಿ ಒಂದೇ ವರ್ಷದಲ್ಲಿ ಎರಡು ಸಲ ಕೊಟ್ಟೂರು ಕೆರೆ ಕೂಡಿ ಬಿದ್ದಿರುವ ಪ್ರಯುಕ್ತ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ.ಮರಿಸ್ವಾಮಿ, ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಎ.ನಸರುಲ್ಲಾ, ಉಪಾಧ್ಯಕ್ಷರಾದ ಜಿ.ಸಿದ್ದಯ್ಯ, ಸ್ಥಾಯಿ ಸಂಸ್ಥೆ ಅಧ್ಯಕ್ಷರಾದ ಅಂಜಿನಮ್ಮ ವಿರುಪಾಕ್ಷಪ್ಪ, ಸದಸ್ಯರಗಳಾದ ತೋಟದ ರಾಮಣ್ಣ, ಕೆಂಗರಾಜ್, ಮೊರಬದ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು