ಇ ಸ್ವತ್ತು ಕೊಡಲು ಪಿ.ಡಿ.ಓ ಅಧಿಕಾರಿ ಲತಾ ಬಾಯಿ ಅಕ್ಕಾಗ ಗ್ರಾಮಸ್ಥರು ₹5000 ದುಡ್ಡು ಕೊಡಬೇಕಂತೆ..? – ಮೇಲಾಧಿಕಾರಿಗಳ ವಿರುಧ್ದ ಗ್ರಾಮಸ್ಥರು ಅಕ್ರೋಶ.
ಕಾಳಾಪುರ ಆ.17

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯತಿ ಪಿ.ಡಿ.ಓ ಲತಾ ಬಾಯಿ ಕಾಳಾಪುರ ಗ್ರಾಮ ಪಂಚಾಯತಿಯಲ್ಲಿ ಸರ್ವಾಧಿಕಾರಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಲತಾ ಬಾಯಿ ಪಿ.ಡಿ.ಓ ಇವರು ಸತತ ಎಂಟು ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡಿ ತನ್ನದೇ ಆದ ಸ್ಪೆಷಲ್ ಕಾನೂನನ್ನು ಗ್ರಾಮ ಪಂಚಾಯಿತಿಯಲ್ಲಿ ರಚನೆ ಮಾಡಿ ಕೊಂಡು ಗ್ರಾಮ ಪಂಚಾಯತಿಯನ್ನು ಉದ್ಧಾರ ಮಾಡುತ್ತೇನೆಂದು.ಕಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ 6 ಗ್ರಾಮಗಳ ಬಡ ಕೂಲಿ ಕಾರ್ಮಿಕ ಜನರ ರಕ್ತವನ್ನು ಹೀರುತ್ತಾ ಕೆಲಸ ಮಾಡುತ್ತಾರಂತೆ ಬಡ ಜನ ರೈತ ಕೂಲಿ ಕಾರ್ಮಿಕರು ಒಂದು ಇ ಖಾತಾ ಪಡೆಯಲು ಗ್ರಾಮಸ್ಥರು ಅರ್ಜಿ ಹಾಕಿದರೆ ಗ್ರಾಮಸ್ಥರನ್ನು ಗ್ರಾಮ ಪಂಚಾಯತಿಗೆ ಅಲೆದಾಡಿಸಿ ಅಲೆದಾಡಿಸಿ ಆ ನಂತರ ತಿಂಗಳಾನು ಗಟ್ಟಲೆ ಮಾಡಿ ಪ್ರತಿಯೊಬ್ಬರ ₹5000 ತೆಗೆದು ಕೊಂಡು ಗ್ರಾಮಸ್ಥರಿಗೆ ಇ-ಖಾತಾವನ್ನು ಕೊಡುತ್ತಾರಂತೆ ಆದರೆ ಇದರ ಬಗ್ಗೆ ಗ್ರಾಮಸ್ಥರು. ನಿಮ್ಮ ಮೇಲಾಧಿಕಾರಿಗಳಿಗೆ ತಿಳಿಸುತ್ತೇನೆಂದರೆ ಅವರಿಗಷ್ಟೇ ಅಲ್ಲಾ ಜಿಲ್ಲಾ ಪಂಚಾಯತ ಸಿ.ಇ.ಓ ಅವರಿಗೆ ತಿಳಿಸು ಅವರು ಸಹ ಒಪ್ಪಿದ್ದಾರೆ.

ಹಿಂಗೂ ತಿಂದ ಮಂಗಮ್ಮ ಇ.ಓ ಅಲ್ಲಾ ಸಿ.ಇ.ಓ ಆದ್ರು ಐ ಡೊಂಟ್ ಕೇರ್ ಅಂತೆ…..
ಎಂದು ಗ್ರಾಮಸ್ಥರ ಮೇಲೆ ಗರಂ ಆಗಿ ಹೇಳುತ್ತಾರಂತೆ ಆದರೆ ಇಲ್ಲಿನ ಗ್ರಾಮಸ್ಥರು ಇದರ ಬಗ್ಗೆ ಮತ್ತೆ ಯಾರನ್ನು ಕೇಳಬೇಕು ಎಂಬ ಪ್ರಶ್ನೆ ಯಾಗಿದೆ. ಆದರೆ ಇಲ್ಲಿ ಪಿ.ಡಿ.ಓ ಅವರು ಮಾತ್ರ ತನ್ನದೇ ಆದ ಸರ್ವಾಧಿಕಾರವನ್ನು ಉಪಯೋಗಿಸಿ ಕೊಂಡು ₹5000 ಗಳನ್ನು ಜನರ ಹತ್ತಿರ ಪಡೆಯುತ್ತಿದ್ದಾರಂತೆ ಇದರ ಬಗ್ಗೆ ಗ್ರಾಮಸ್ಥರು ಮಾಧ್ಯಮ ದೊಂದಿಗೆ ಮಾತನಾಡಿ ತಮ್ಮ ಅಳಲನ್ನು ತೊಡಿಕೊಂಡು ಮೇಲಾಧಿಕಾರಿಗಳ ವಿರುಧ್ದ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು