ಉಡುಪಿ ತಾಲೂಕಾ ಕಛೇರಿಯಲ್ಲಿ ಲಕ್ಷಾಂತರ ರೂಗಳ – ಖರೀದಿಯಲ್ಲಿ ಅವ್ಯವಹಾರ!!!
ಉಡುಪಿ ಆ.17


ಹಿಂಗ್ ತಿಂದ ಮಂಗಣ್ಣ ನಿನ್ನ ಚಾಳಿ ಎಲ್ಲರಿಗೂ ಪಸರಿದಲೊಣ್ಣೊ
ಜಿಲ್ಲಾ ಕಂದಾಯ ಇಲಾಖೆಯ ಉಡುಪಿ ತಾಲ್ಲೂಕು ಕಛೇರಿಯಲ್ಲಿ ಈ ಹಿಂದೆ ಇ ಎಸ್ ಟಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸ್ತುತ ದ್ವಿ.ದ ಸಹಾಯಕಿ ಯಾದ ಗ್ರಾಮ ಕರಣಿಕಳಾದ ಶ್ರೀಮತಿ ಸುರೇಖಾ ಇವರು ಅಧಿಕಾರ ದುರುಪಯೋಗ ಮಾಡಿಕೊಂಡು ಇವಳ ಗಂಡ ವಿನಯ್ ಕುಲಾಲ್ ಹೆಸರಿನ ಕಂಪೆನಿಗೆ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣ ವರ್ಗಾವಣೆ ಮಾಡಿ ಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬ್ರಹ್ಮಾವರ ತಾಲ್ಲೂಕು, ಬ್ರಹ್ಮಾವರ ಹೋಬಳಿ, ಉಪ್ಪೂರು ಗ್ರಾಮದ ಗ್ರಾಮ ಕರಣಿಕಳಾದ ಸುರೇಖಾ ರವರು ಪ್ರಸ್ತುತ ಡೆಪ್ಯೂಟೇಶನ್ ಮೇಲೆ ಉಡುಪಿ ತಾಲೂಕು ಕಛೇರಿಯಲ್ಲಿ ದ್ವಿ.ದ ಸಹಾಯಕಿ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಹೊಸದಾಗಿ ತಾಲೂಕು ಕಛೇರಿ ಕಟ್ಟಡ ನಿರ್ಮಾಣದ ನಂತರ ಕಛೇರಿಯ ಪೀಠೋಪಕರಣ ಮತ್ತು ಕಂಪ್ಯೂಟರ್ ಪರಿಕರ ಮತ್ತು ಸ್ಟೇಷನರಿ ಸಾಮಾಗ್ರಿ ಖರೀದಿಯಲ್ಲಿ ಕರ್ನಾಟಕ : ಪಾರದರ್ಶಕ ನಿಯಮ ಪಾಲಿಸದೇ ತನ್ನ ಪತಿಯಾದ ವಿನಯ್ ಕುಲಾಲ್ ಹೆಸರಿಗೆ ಸೇರಿದ GSTIN/UIN: 29BSKPK9185K1ZS, #6-12/2/3 KUNTHALAKATTE, BAIRAMPALLI, PERDUR, Udupi- 576124, ವಿಳಾಸದ LAHARI ELECTRONICS STATIONERY AND FANCY ಮಾಲಿಕತ್ವದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಮಾಗ್ರಿಗಳನ್ನು ಹೊಸ ತಾಲ್ಲೂಕು ಕಛೇರಿಗೆ ಪೂರೈಸದೇ ಕೇವಲ ರಿಜಿಸ್ಟರ್ಗಳಲ್ಲಿ ನಮೂದಿಸಿಕೊಂಡು ಅಕ್ರಮವಾಗಿ ಲಕ್ಷಾಂತರ ರೂಪಾಯಿ ಬಿಲ್ ಪಾವತಿ ಮಾಡಿ ಕೊಂಡಿರುತ್ತಾರೆ.

ನೂತನ ತಾಲೂಕು ಕಛೇರಿಗೆ ಪೀಠೋಪಕರಣ ಮತ್ತು ಕಂಪ್ಯೂಟರ್ ಪರಿಕರ ಮತ್ತು ಸ್ಟೇಷನರಿ ಸಾಮಾಗ್ರಿಗಳನ್ನು ಕರ್ನಾಟಕ ಪಾರದರ್ಶಕ ನಿಯಮದಂತೆ ಯಾವುದೇ ರೀತಿಯ ದರ ಪಟ್ಟಿ /ಟೆಂಡರ್ ಕರೆಯದೇ ಅಂದಿನ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಜೊತೆ ಸೇರಿ ಕೊಂಡು ಸರಕಾರಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುತ್ತಾರೆ.
ಉಡುಪಿ ನಗರದಲ್ಲಿ ಬಹಳಷ್ಟು ಕಂಪ್ಯೂಟರ್ ಮತ್ತು ಪರಿಕರ, ಸ್ಟೇಷನರಿ ಸಾಮಾಗ್ರಿ ಅಂಗಡಿಗಳು ಲಭ್ಯವಿರುವಾಗ ದೂರದ ಕಾಪು ವಿಧಾನ ಸಭಾ ಕ್ಷೇತ್ರದ ಪೆರ್ಡೂರು ಗ್ರಾಮದಲ್ಲಿರುವ ತಾಲೂಕು ಕಛೇರಿ ಸಿಬ್ಬಂದಿಯಾದ ಶ್ರೀಮತಿ ಸುರೇಖ ಇವರ ಗಂಡನ ಅಂಗಡಿ ಲಹರಿ ಎಲೆಕ್ಟ್ರಾನಿಕ್ಸ್ ಸ್ಟೇಷನರಿ ಮತ್ತು ಫ್ಯಾನ್ಸಿ ಸ್ಟೋರ್ ನಿಂದ ಖರೀದಿ ಮಾಡಿರುವ ಹಿಂದಿನ ಮರ್ಮ ಏನಿರಬಹುದು ಎಂಬುದಾಗಿ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಲಹರಿ ಎಲೆಕ್ಟ್ರಾನಿಕ್ಸ್ ಸ್ಟೇಷನರಿ ಮತ್ತು ಫ್ಯಾನ್ಸಿ ಸ್ಟೋರ್ ನಿಂದ ಖರೀದಿ ಮಾಡಿರುವ ಪ್ರಕ್ರಿಯೆಯಲ್ಲಿ ಇದುವರೆಗೂ ಉಡುಪಿ ತಾಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸೇರಿದಂತೆ ಡೆಪ್ಯೂಟಿ ತಹಶೀಲ್ದಾರ್ ರವಿಶಂಕರ್, ಇ ಎಸ್ ಟಿ ವಿಷಯ ನಿರ್ವಾಹಕಿ ವಿದ್ಯಾ , ಸುರೇಖಾ ಇವರುಗಳು ಒಟ್ಟಾಗಿ ಸೇರಿಕೊಂಡು ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನೆಡೆಸಿರುವುದು ಬೆಳಕಿಗೆ ಬಂದಿದೆ. ಸರಕಾರಿ ನೌಕರನು ತನ್ನ ಪತಿ / ಪತ್ನಿಯ ಅಥವಾ ತನ್ನ ಕುಟುಂಬದ ಯಾರೇ ಇತರ ಸದಸ್ಯರ ಒಡೆತನದಲ್ಲಿರುವ ಅಥವಾ ನಿರ್ವಹಣೆಯಲ್ಲಿರುವ ವ್ಯವಹಾರವನ್ನು ಅಥವಾ ಏಜೆನ್ಸಿಯನ್ನು ಅಥವಾ ಕಮಿಷನ್ ಏಜೆನ್ಸಿಯನ್ನು ಬೆಂಬಲಿಸುವುದು ಕರ್ನಾಟಕ ಸರಕಾರಿ ನೌಕರರ ನಡೆತೆ ನಿಯಮಗಳ ಉಲ್ಲಂಘನೆಯಾಗಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ.
ಗ್ರಾಮ ಕರಣಿಕರು ಗ್ರಾಮಗಳಲ್ಲಿ ಲಭ್ಯವಿರಬೇಕು ಎಂಬುದಾಗಿ ನಿಯೋಜನೆ ಮೇಲೆ ಇದ್ದವರನ್ನು ಗ್ರಾಮಕ್ಕೆ ಕಳುಹಿಸಬೇಕೆಂಬ ಸರಕಾರದ ಆದೇಶ ವಿದ್ದರೂ ಸಹ ಇವರುಗಳಿಗೆ ಯಾವುದೇ ನಿಯಮ ಅನ್ವಯಿಸದೇ ಇರುವುದು ಬಹಳ ಆಶ್ಚರ್ಯವನ್ನುಂಟು ಮಾಡಿದೆ. ಇವರುಗಳ ನಿಯೋಜನೆ ಆದೇಶವನ್ನು ತಕ್ಷಣ ರದ್ದುಪಡಿಸಿ ಇವರುಗಳನ್ನು ತಮ್ಮ ಮೂಲ ಕರ್ತವ್ಯದ ಗ್ರಾಮಕ್ಕೆ ಕಳುಹಿಸಬೇಕು ಮತ್ತು ಇವರುಗಳು ಸಾಕ್ಷಿ ನಾಶಪಡಿಸುವ ಸಾದ್ಯತೆ ಇರುವ ಕಾರಣ ತಕ್ಷಣ ಇವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸದರಿ ಪ್ರಕರಣವನ್ನು ಪ್ರಾಮಾಣಿಕ ಅಧಿಕಾರಿಗಳಿಂದ ತನಿಖೆ ನೆಡೆಸಿ ಇವರಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ.
ವರದಿ:ಆರತಿ.ಗಿಳಿಯಾರು.ಉಡುಪಿ
 
				
 
						