ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಅವರಿಗೆ ೭೯ ನೇ. ಸ್ವಾತಂತ್ರ್ಯ ಉತ್ಸವದಲ್ಲಿ – ತಾಲೂಕಾ ಆಡಳಿತ ಮಂಡಳಿ ಯಿಂದ ಸನ್ಮಾನ.
ಚಳ್ಳಕೆರೆ ಆ.17

ಆಗಸ್ಟ್ ೧೫ ರಂದು ನಡೆದ ೭೯ ನೇ. ಸ್ವಾತಂತ್ರ್ಯ ಸಂಭ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಒಕ್ಕೂಟ ಹಾಗೂ ತಾಲ್ಲೂಕು ಆಡಳಿತ ಮಂಡಳಿ ಯಿಂದ ಕವಿಯತ್ರಿ ಡಿ.ಶಬ್ರಿನಾ ಮಹಮದ್ ಅಲಿ ಯವರನ್ನು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಟಿ.ರಘುಮೂರ್ತಿ ಸರ್ & ತಾಲ್ಲೂಕು ದಂಡಾಧಿಕಾರಿಗಳಾದ ಸನ್ಮಾನ್ಯ ಶ್ರೀ ರೆಹಾನ್ ಪಾಷಾ ಸರ್ ಅವರು ಸನ್ಮಾನಿಸದರು. ಅವರ ಪರಿಚಯ ಹೀಗಿದೆ.
ವ್ಯಕ್ತಿ ಪರಿಚಯ:-
ಹೆಸರು: ಡಿ.ಶಬ್ರಿನಾ ಮಹಮದ್ ಅಲಿ
ತಂದೆ: ದಾದಾಪೀರ್ ಜಿ.ಹೆಚ್, ದಿಬ್ಬದಹಳ್ಳಿ
ತಾಯಿ: ಅಮಿನಾಬಿ
ಪತಿ: ಮಹಮದ್ ಅಲಿ, ಶಿಕ್ಷಕರು, ಗೊರ್ಲಕಟ್ಟೆ
ಮಕ್ಕಳು: ಇನ್ಷಾ ಎಂ.ಎಸ್ ಶಿಫಾ ಎಂ.ಎಸ್ ವಿಹಾನ್ ಅಲಿ ಎಂ.ಎಸ್.
ವೃತ್ತಿ:-
ಶಿಕ್ಷಕಿ:ಚಂದ್ರಗಿರಿಹಟ್ಟಿ,ನನ್ನಿವಾಳ ಕ್ಲಸ್ಟರ್ಪ್ರವೃತ್ತಿ: ಸಾಹಿತಿಗಳು & ಬಸವ ತತ್ವ ಚಿಂತಕರು, ಚಳ್ಳಕೆರೆ

ವಿಶೇಷ ಆಸಕ್ತಿ:-
ಅಪ್ಪಟ ಕನ್ನಡತಿಯಾದ ಇವರು ತಮ್ಮ ನೂತನ ಮನೆಗೆ ‘ಕನ್ನಡ ಕೌಸ್ತುಭ’ ಎಂದು ನಾಮಕರಣ ಮಾಡಿ ಮನೆಯಲ್ಲಿ ಸಾವಿರಾರು ಪುಸ್ತಕಗಳನಿಟ್ಟು ಡಾ, ಬಿ.ಆರ್ ಅಂಬೇಡ್ಕರ್ ಗ್ರಂಥಾಲಯ ತೆರೆದು ಆಸಕ್ತ ಓದುಗರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ.
ಕೃತಿಗಳು:-
ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ೨೦೨೧ ನೇ. ಸಾಲಿನ ಚೊಚ್ಚಲ ಕೃತಿ ಪ್ರೋತ್ಸಾಹ ಧನಕೆ ಆಯ್ಕೆ ಯಾಗಿ ಬೆಂಗಳೂರಿನ ನಯನ ರಂಗ ಮಂದಿರದಲ್ಲಿ ಬರಗೂರು ರಾಮಚಂದ್ರಪ್ಪ ಅವರಿಂದ ಬಿಡುಗಡೆ ಗೊಂಡಿದೆ.
ಹೂ ಮಾಲೆಗೆ ನೂಲು ಇವರ ಮತ್ತೊಂದು ಕೃತಿ ಯಾಗಿದೆ. ಇದು ಚಳ್ಳಕೆರೆಯ ಹಿರಿಯ ಸಾಹಿತಿಗಳಾದ ಬಿ.ತಿಪ್ಪಣ್ಣ ಮರಿಕುಂಟೆ ಅವರ ಸ್ವರ್ಗಸುಖ ಕಥಾ ಸಂಕಲನಕೆ ಬರೆದ ವಿಮರ್ಶಾ ಕೃತಿ ಯಾಗಿದೆ.

ಪ್ರಶಸ್ತಿಗಳು:-
೨೦೨೦ ರಲ್ಲಿ ಕ.ರಾ ಸರ್ಕಾರಿ ಶಿಕ್ಷಕರ ಸಂಘಗಳ ಒಕ್ಕೂಟ ದಿಂದ ರಾಜ್ಯ ಮಟ್ಟದ ಪ್ರಥಮ ಮಹಿಳಾ ಸಾಧನ ಶಿಕ್ಷಕಿ ಪ್ತಶಸ್ತಿ ಲಭಿಸಿದೆ.
೨೦೨೦ ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಿಂದ ಡಾ.ಕವಿತಾ ಕೃಷ್ಣ ಪ್ತಶಸ್ತಿ.
೨೦೨೨ ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಾ ಏಕ ಪಾತ್ರಾಭಿನಯಕೆ ಅಭಿನವ ಶಾರದೆ ರಾಜ್ಯ ಪ್ತಶಶಸ್ತಿ.
೨೦೨೩ ರಲ್ಲಿ ವಿಜಯ ಕರ್ನಾಟಕ & ಸ್ನೇಹ ಬುಕ್ ಹೌಸ್ ನಡೆಸಿದ ಬದುಕು ಬದಲಿಸುವ ಬರಹದಲ್ಲಿ ಇವರ ಲೇಖನ ‘ಬದುಕೆಂದರೆ ಭಯವಲ್ಲ ಭರವಸೆ’ ಟಾಪ್ ೨೫ ರ ಪಟ್ಟಿಗೆ ಆಯ್ಕೆ.
ಪ್ರತಿ ವರ್ಷ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾಡುವ ಕಿ.ರಂ ರಾಜ್ಯ ಮಟ್ಟದ ಕವಿ ಗೋಷ್ಠಿಗೆ ನಿರಂತರವಾಗಿ ೨೦೨೪ & ೨೫ ನೇ. ಸಾಲಿಗೆ ಎರಡು ಬಾರಿ ಇವರ ಕವಿತೆಯಾಗಿ ಆಯ್ಕೆಯಾಗಿ ಪ್ರಕಟ ಗೊಂಡಿದೆ.
ಶ್ರೀಬಸವ ಟಿವಿಯಲ್ಲಿ ಅನುಭವ ಗೋಷ್ಟಿ ಕಾರ್ಯಕ್ರಮದಲ್ಲಿ ೨೦ ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.
ಅಷ್ಟೇಯಲ್ಲದೇ ಬಸವ ತತ್ವ ಪ್ರಿಯರಾದ ಇವರು ಚಳ್ಳಕೆರೆ, ಚಿತ್ರದುರ್ಗ, ಪಾಂಡೋಮಟ್ಟಿ, ಬೆಂಗಳೂರು, ಬಸವ ಕಲ್ಯಾಣ ಮುಂತಾದ ನಾನಾ ಕಡೆ ಬಸವ ತತ್ವದ ಉಪನ್ಯಾಸ ನೀಡಿದ್ದಾರೆ. ಇವರ ಕಾರ್ಯ ಕ್ಷೇತ್ರ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪಸರಿಸಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ನಿತ್ಯ ನೂತನ ನಿರಂತರ ಮಿಂಚಿನ ಸಂಚಾರ ಆಗಲಿ ಎಂದು ಅಭಿಲಾಷೆ ಪಡುತಿದೆ.