ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ – ಮುಸ್ಲಿಂ ಮಕ್ಕಳಿಗೆ ಪ್ರಥಮ ಬಹುಮಾನ.
ಹುಲ್ಲೂರು ಆ.18





ಮುದ್ದೇಬಿಹಾಳ ತಾಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ಯವಾಗಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಮಕ್ಕಳಲ್ಲಿ ಭಕ್ತಿ ಭಾವನೆ ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವು ಭವ್ಯವಾಗಿ ನೆರವೇರಿತು. ಶಾಲೆಯ ಆವರಣದಲ್ಲಿ ವಿವಿಧ ವೇಷ ಭೂಷಣ, ವೃತ್ಯ, ಗಾಯನ, ಹಾಗೂ ಕೃಷ್ಣ ಲೀಲೆಯ ನಾಟಕ ಪ್ರದರ್ಶನಗಳೊಂದಿಗೆ ಮಕ್ಕಳು ತಮ್ಮ ಕೌಶಲ್ಯವನ್ನು ಮೆರೆದರು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷದಲ್ಲಿ ಮೆರಗಿನಿಂದ ಭಾಗವಹಿಸಿದ್ದರು. ಅವರು ಧಾರ್ಮಿಕ ಸೌಹಾರ್ತೆಯ ಸಂಕೇತವಾಗಿ ಆಕರ್ಷಕ ಉಡುಗೆ ತೊಟ್ಟು ಪ್ರೇಕ್ಷಕರ ಮನ ಗೆದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು. ಗ್ರಾಮಸ್ಥರು. ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಶಾಲಾ ಮುಖ್ಯೋಪಾಧ್ಯರು ಮಾತನಾಡಿ ಧಾರ್ಮಿಕ ಸೌಹಾರ್ತೆ ಒಗ್ಗಟ್ಟು ಹಾಗೂ ಪರಂಪರೆಯ ಅರಿವು ಮಕ್ಕಳಲ್ಲಿ ಮೂಡಿಸಲು ಇಂಥ ಕಾರ್ಯಕ್ರಮಗಳನ್ನು ಸಹಾಯಕವಾಗುತ್ತವೆ ಎಂದು ಹೇಳಿದರು. ನಂತರ ಪಾಲಕ ಪ್ರತಿನಿಧಿ ಗೀತಾ ಪಾಟೀಲ್. ಮಾತನಾಡಿ. ಗ್ರಾಮೀಣ ಪ್ರದೇಶದಲ್ಲಿರುವ ನಮ್ಮಂಥ ಎಲೆ ಮರೆಯ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಿದ್ದು ಸಂತಸ ತಂದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಶಾಲೆ ಬೆಳೆಯಲಿ ಎಂದರು. ಮಕ್ಕಳ ಸಾಂಸ್ಕೃತಿಕ ಪ್ರದರ್ಶನದಲ್ಲಿ ಅವರ ಕಲೆ ವೇಶ ಭೂಷಣ ಹಾಗೂ ನೈಪುಣ್ಯವನ್ನು ಗುರುತಿಸಿ ನಿರ್ಣಾಯಕ ಮಂಡಳಿಯವರು ರೀಧಾ ಕರ್ಜಗಿ ಹಾಗೂ ವಿಕೆಜಿಯಲ್ಲಿ ರಿಪಾ ಕರ್ಜಿಗಿಗೆ. ಅದರಲ್ಲಿ ಎಲ್.ಕೆ.ಜಿ ಮಕ್ಕಳಾದ ವೇದಾಂತ್ ಯರಜೆರಿ. ಯು.ಕೆ.ಜಿಯಲ್ಲಿ ರೂಪಾ ಹೂಗಾರ್. ಒಂದನೇ ತರಗತಿಯಲ್ಲಿ ಗೀತಾ ಪಾಟೀಲ್. ಎರಡನೇ ತರಗತಿಯಲ್ಲಿ. ಪರಸಪ್ಪ ವಡ್ಡರ್. ಮೂರನೆಯ ತರಗತಿಯಲ್ಲಿ. ಸಾವಕ್ಕ ಆಡಿನ. ಹೀಗೆ ಪ್ರಥಮ ಬಹುಮಾನ ಪಡೆದು ಕೊಂಡರು. ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್ ಕೊಪ್ಪ. ಬಹುಮಾನ ವಿತರಿಸಿದರು. ಎಚ್.ಆರ್ ಬಾಗಲಕೋಟ ನಿರೂಪಿಸಿದರು. ಶೋಭಾ ವಂದಿಸಿದರು. ನಿರ್ಣಯಕರಾಗಿ ವಿಜಯಲಕ್ಷ್ಮಿ ಇದ್ದರು. ಇನ್ನೂ ಎಲ್ಲಾ ಊರಿನ ಪಾಲಕರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ