79 ನೇ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ – ಕಾರ್ಯಕ್ರಮವನ್ನು ವಿಜೃಂಭಣೆ ಯಿಂದ ಜರುಗಿತು.
ರಾಯಚೂರು ಆ.18





RTPS ಯೋಜನಾ ಪ್ರದೇಶದ ಆಡಳಿತ ಕಛೇರಿ ಮುಂಭಾಗದಲ್ಲಿ 79 ನೇ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ವಿಜೃಂಭಣೆ ಯಿಂದ RTPS ನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀ ಸೂರ್ಯಕಾಂತ ಆರ್ ಕಬಾಡೆ ಇವರು ನೆರವೇರಿಸಿದರು. ದೇಶದ ಸ್ವಾತಂತ್ರದ ಬಗ್ಗೆ ಹಾಗೂ ನಿಗಮವು ವಿದ್ಯುತನ್ನು ವಿವಿಧ ಮೂಲಗಳಾದ ಜಲ, ಕಲ್ಲಿದ್ದಲು, ಪವನ, ಸೋಲಾರ್, ಗ್ಯಾಸ್ ಹಾಗೂ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದನೆಯನ್ನು ಮಾಡಿ ರಾಜ್ಯಕ್ಕೆ 40% ಹೆಚ್ಚು ವಿದ್ಯುತನ್ನು ಪೂರೈಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಕೆ.ಕೆ ಕೃಷ್ಣರಾಜ್, CE (O&M) RTPS, ಶ್ರೀ ಶಂಕರ್ ನಾಯಕ CE(FM)RTPS, ಶ್ರೀ ಅಮರೇಶ್, DGMHRD-RTPS, CISF- ಅಧಿಕಾರಿಗಳು, RTPS ನ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು/ಕಾರ್ಯದರ್ಶಿಗಳು ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಕಾರಣೀಭೂತರಾದರು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ.