ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಾನಾ ಬೇಡಿಕೆಗಳು ಹಾಗೂ ಮೀಸಲಾತಿಗಾಗಿ – ಆಗಸ್ಟ್ 19 ರಂದು ಪ್ರತಿಭಟನೆ.

ಕಲಬುರ್ಗಿ ಆ.18

ಬೆಂಗಳೂರಿನಲ್ಲಿ ನಡೆಯುತ್ತಿರುವ 2025 ನೇ. ಸಾಲಿನ ಮುಂಗಾರು ಅಧಿವೇಶನದಲ್ಲಿ ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳು ಹಾಗೂ ಮೀಸಲಾತಿಗಾಗಿ ದಿನಾಂಕ 19-08-2025 ರಂದು ಮಂಗಳವಾರ ಬೆಳಿಗ್ಗೆ 10:30 ಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮಠಾಧೀಶರು ಒಂದಿಗೆ ಹಾಗೂ ನೂರಾರು ಹಡಪದ ಸಮಾಜದ ಬಾಂಧವರೊಂದಿಗೆ ಹಾಗೂ ಮಹಿಳಾ ತಾಯಂದಿರು ಯುವಕ ಮಿತ್ರರು ಸೇರಿ ಪ್ರತಿಭಟನೆ ರ್ಯಾಲಿ ಮಾಡುತ್ತಾ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಹಿಂದುಳಿದ ಇಲಾಖೆ ಸವಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಕಾರಣ ಹಡಪದ ಅಪ್ಪಣ್ಣ ಸಮಾಜದ ಹಲವಾರು ಬೇಡಿಕೆಗಳು ಜಲ್ವಂತ ಸಮಸ್ಯೆಗಳು ಕ್ಷೌರಿಕಕರ ಮೇಲೆ ದಿನ ನಿತ್ಯ ನಡೆಯುತ್ತಿರುವ ಮಾರಣಾಂತಿಕ ಹಲ್ಲೆಗಳು ಹಾಗೂ ಜಾತಿ ನಿಂದನೆ ಹೀಗೆ ಹಲವು ಬಗೆಯ ಸಮಸ್ಯೆಗಳು ಹಾಗೂ ನಾನಾ ಬೇಡಿಕೆಗಳು ಹಾಗೂ ಹಿಂದುಳಿದ ವರ್ಗಗಳಲ್ಲಿ ಅತೀ ಹಿಂದುಳಿದ ಹಡಪದ ಕ್ಷೌರಿಕ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕಾಗಿ ಹಾಗೂ ಹಿಂದುಳಿದ ವರ್ಗಗಳಲ್ಲಿ ಒಳ ಮೀಸಲಾತಿ ನೀಡಬೇಕಾಗಿ ಬೃಹತ್ ಪ್ರಮಾಣದ ಹೋರಾಟ ಮಾಡುತ್ತಿದ್ದು.

ಈ ಸದರಿ ಹೋರಾಟಕ್ಕೆ ಹಡಪದ ಸಮಾಜದ ಭಾಂಧವರು. ಮಹಿಳಾ ತಾಯಂದಿರು ಯುವಕರು. ಆತ್ಮೀಯ ಸಹೋದರರು. ಹಾಗೂ ಅಂಗಡಿ ಮಾಲೀಕರು ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಸರ್ಕಾರದ ಗಮನ ಸೆಳೆಯಬೇಕು ಹಾಗೂ ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಬೇಕೆಂದರೆ ತಾವು ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಭಾಂದವರು ಬಂದು ಈ ಹೋರಾಟ ವನ್ನು ಯಶಸ್ವಿ ಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷ ಈರಣ್ಣ.ಸಿ ಹಡಪದ ಸಣ್ಣೂರ. ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ಭಗವಂತ ಹಡಪದ ಕಿರಣಗಿ, ಮತ್ತು ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಸೇರಿದಂತೆ ಈ ಪತ್ರಿಕೆಯ ಮೂಲಕ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣ.ಸಿ ಹಡಪದ ಸಣ್ಣೂರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button