“ಬಂಜಾರ ಗೌರವ ಪುರಸ್ಕಾರ” 2025 ಬಂಜಾರ ಕನ್ವೇಷನ್ ಹಾಲ್ ನಲ್ಲಿ – ಕಾರ್ಯಕ್ರಮ ಜರಗಿತು.
ಶಿವಮೊಗ್ಗ ಆ.18

ಕೋರ್ಟ್ ಸರ್ಕಲ್ ಶಿವಮೊಗ್ಗ ಇಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಬಂಜಾರ ಯುವ ಸಮಾವೇಶ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ -2025 ರಲ್ಲಿ “ಬಂಜಾರ ಗೌರವ ಪುರಸ್ಕಾರ “2025 ಪ್ರಶಸ್ತಿಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಡಾ, ನಾಗರಾಜ.ನಾಯ್ಕ ಎಂ, ಕರ್ನಾಟಕ ರಾಜ್ಯ ಉತ್ತಮ ಗ್ರಂಥಪಾಲಕ ರಾಜ್ಯ ಪ್ರಸಸ್ತಿ ಪುರಸ್ಕೃತರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊನ್ನಾಳಿ ಹಾಗೂ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಹೊನ್ನಾಳಿ, ಶ್ರೀ ಉಮೇಶ ನಾಯ್ಕ ಚಿನ್ನ ಸಮುದ್ರ ಜಾನಪದ ಗಾಯಕರು ಮತ್ತು ಕಲಾವಿದರು ಇವರು ಸುಮಾರು 25 ವರ್ಷಕ್ಕೂ ಹೆಚ್ಚು ಕಾಲ ಜಾನಪದ ಗಾಯನ ಮತ್ತು ಸಮಾಜ ಮುಖಿ ಕಾರ್ಯವನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಯಿತು.


ಶ್ರೀ ಶೇಖರ್.ನಾಯ್ಕ, ಕಾರ್ಯ ಅಧಕ್ಷರು, ಕರ್ನಾಟಕ ರೈತ ಸಂಘ, ದಾವಣಗೆರೆ ಮತ್ತು ಶ್ರೀ ರಂಗನಾಥ್ ಹೆಚ್, ಕುವೆಂಪು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಥಮ ರಾಂಕ್ ಮತ್ತು ಹತ್ತು ಚಿನ್ನದ ಪದಕ ವಿಜೇತರು ಇವರು ಗಳಿಗೆ ಬಂಜಾರ ರಾಜ್ಯ ವಿದ್ಯಾರ್ಥಿ ಸಂಘವು ಇವರ ಸಾಧನೆಯನ್ನು ಗುರುತಿಸಿ ಪ್ರಸಸ್ತಿಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ಸರ್ದಾರ್ ಸೇವಾಲಾಲ್ ಮಹಾರಾಜ್, ಶ್ರೀ ಸೇನಾಭಗತ್ ಮಹಾರಾಜ್, ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಗಿರೀಶ್.ಡಿ ಆರ್, ಡಾ, ಈಶ್ವರ ನಾಯ್ಕ, ಡಾ, ಹೇಮ್ಲನಾಯ್ಕ ಡಾ, ರಾಜನಾಯ್ಕ ಡಾ, ಉತ್ತಮ, ಶ್ರೀ ಮಂಡೇನಕೊಪ್ಪ ದೇವರಾಜ ನಾಯ್ಕ, ಉಮಾಮಹೇಶ್ವ ನಾಯ್ಕ ಇನ್ನೂ ಮುಂತಾದ ಗಣ್ಯರ ಸಮುಖದಲ್ಲಿ “ಬಂಜಾರ ಗೌರವ ಪುರಸ್ಕಾರ 2025” ನೀಡಿ ಗೌರವಿಸಲಾಯಿತು.

