“ಅನವರತ ಸಿಹಿ ಶುಭ ಹಂಚುನೊಂದವರ ನೋವು ದುಃಖ ಮರೆಸು”…..

ಎದುರಲಿ ಸತ್ಯ ನೇರ ನುಡಿ




ಇರದವರ ಬಗ್ಗೆ ಸುಳ್ಳು ಪೊಳ್ಳು ಬಿಡಿ
ಯಾರದ್ದಾದರೇನು ಉತ್ತಮತನವ ಹೊಗಳು
ತಪ್ಪುಗಳನ್ನು ಎದುರಲ್ಲೇ ಹೇಳು
ಇನ್ನೊಬ್ಬರ ನ್ಯೂನತೆ ನಿನ್ನತನಕೆ ಬೇಡ
ಅರಿಯದೇ ಕೀಳತನದ ಭಾವ ಕಿವಿಗೆ
ತುಂಬಬೇಡ
ಬಿರುನುಡಿಯ ಮಾತು ಬೇಡ
ಸವಿ ಸವಿ ಸಿಹಿ ಮುತ್ತು ಸುರಿ
ಅನುಭವದ ಸಿಹಿ ಉಂಡು ನೀ ಮೆರಿ
ಬೇರೆಯವರ ಜೀವನದಲ್ಲಿ ಆಟ ಬೇಡ
ನಾಟಕದ ಪಾಠ ನಮಗೆ ಮರಳುತ್ತೆ
ನೀ ಕೊಟ್ಟಿದ್ದು ನೀನ್ನಲ್ಲಿಯೇ ಸೇರುತ್ತೆ
ಭಾವದಂತೆ ಭಾಗ್ಯ ನಿನ್ನ ಬತ್ತಳಿಕೆಯಲಿ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ