ಗಣೇಶನ ಹಬ್ಬದ ಪ್ರಯುಕ್ತ ಪಟ್ಟಣದ ಮುಖ್ಯ ರಸ್ತೆಗಳಲ್ಲಿ – ಪೊಲೀಸ್ ಪಥ ಸಂಚಲನ.
ಕೊಟ್ಟೂರು ಆ .19

ಗಣೇಶ ಹಬ್ಬದ ಪ್ರಯುಕ್ತ ಮಾನ್ಯ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ನೇತೃತ್ವದಲ್ಲಿ ಕೊಟ್ಟೂರಿನ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಗಣೇಶನ ಹಬ್ಬ ಆಚರಣೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದೆ ಜಾತಿ ಭೇದ ಬಾವ ಎನ್ನದೆ ಎಲ್ಲರೂ ಒಂದೇ ಎನ್ನುವಂತೆ ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು ಎಂದು ಸಾರ್ವಜನಿಕರಿಗೆ ರಸ್ತೆಗಳ ಪಥ ಸಂಚಲನ ಮಾಡುವುದರ ಮೂಲಕ ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿ.ನಾರಾಯಣ ಸಿಪಿಐ, ಕೊಟ್ಟೂರು ಪ್ರಹ್ಲಾದ್ ಕೂಡ್ಲಿಗಿ ಸಿಪಿಐ, ಗೀತಾಂಜಲಿ ಸಿಂಧೆ ಪಿಎಸ್ಐ ಕೊಟ್ಟೂರು ಮತ್ತು ಸಿಬ್ಬಂದಿ ವರ್ಗ ಹಾಗೂ ಕೆ.ಎಸ್.ಆರ್.ಪಿ ತುಕಡಿಗಳು ರಸ್ತೆಗಳ ಪಥ ಸಂಚಲನದಲ್ಲಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು