ಕರ್ತವ್ಯದ ಜೊತೆಯಲ್ಲಿ ಮಾನವೀಯತೆ ತೋರಿದ ಅಗ್ನಿಶಾಮಕ ಇಲಾಖೆ – ಸಾರ್ವಜನಿಕರಿಂದ ಇಲಾಖೆಗೆ ಗೌರವ ಪೂರ್ವಕ ನಮನಗಳು.
ರೋಣ ಆ.19

ತಾಲೂಕಿನ ಅಗ್ನಿಶಾಮಕ ಇಲಾಖೆಯವರು ಕೇವಲ ಬೆಂಕಿ ಆರಿಸುವ ಕೆಲಸವಷ್ಟೇ ಅಲ್ಲದೆ ಇನ್ನೂ ಹಲವಾರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಅಗ್ನಿಶಾಮಕ ಇಲಾಖೆಯವರು ಯಾವಾಗಲು ಮುಂದೆ ಇರುತ್ತಾರೆ.ದಿನಾಂಕ 17/8/2025 ರಂದು ರೋಣ ನಗರದ ವಾರ್ಡ್ 03 ರಲ್ಲಿರುವ ಕರಬಶೆಟ್ರ ಓಣಿಯಲ್ಲಿ ಸೀದಪ್ಪ ಎಂಬ ನಿವಾಸಿ ಯವರ ಆಕಳು ಚೆಲ್ಲಾಟ ವಾಡುತ್ತಾ ಮನೆ ಮುಂದೆ ಇದ್ದ 45 ಅಡಿ ಹಾಳು ಭಾವಿಯಲ್ಲಿ ಬಿದ್ದಿತ್ತು, ಇದನ್ನು ಗಮನಿಸಿದ ಮನೆ ಮಾಲೀಕ ಮಹಾಂತೇಶ್. ಕರಬಶೆಟ್ರ್ ರವರು ಇಲಾಖೆಗೆ ತಿಳಿಸಿದರು.ತಕ್ಷಣ KA 42, G 474 ಇಲಾಖೆ ವಾಹನದೊಂದಿಗೆ ಅಗ್ನಿ ಶಾಮಕ ಪ್ರಭಾರಿ ಅಧಿಕಾರಿಗಳಾದ ಜಿ.ಎಚ್ ಮಾಗಿಯವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದರು. ಎಲ್ಲಾವನ್ನು ಪರಿಶೀಲನೆ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಒಬ್ಬರನ್ನು ಆ ಭಾವಿಯಲ್ಲಿ ಇಳಿಸಿ ಆನಂತರ ಹಗ್ಗ ಹಾಗೂ ಹರ್ನೆಸ್ ಬೆಲ್ಟ್ ನಿಂದ್ ಆಕಳಿಗೆ ಕಟ್ಟಿ ನಿಧಾನವಾಗಿ ಮೇಲಕ್ಕೆ ಎತ್ತಿ ಆಕಳನ್ನು ಮಾಲೀಕರಿಗೆ ಒಪ್ಪಿಸಲಾಯಿತು.ಈ ಸಮಯದಲ್ಲಿ ಅಗ್ನಿಶಾಮಕ ಅಧಿಕಾರಿಗಳಾದ ಜಿ.ಎಚ್ ಮಾಗಿ, ಹಾಗೂ ಸಿಬ್ಬಂದಿಗಳಾದ ಗೋಪಾಲ ರಾಟೊಡ, ಗಣೇಶ್ ಶಿವಶಿoಪಿ, ಶಿವಲಿಂಗ ಮೇಲಮಟ್ಟಿ, ಯಮನಪ್ಪ ಹಲಗೇರಿ, ರಾಜು ಯರಝರಿ ಹಾಗೂ ಓಣಿಯ ಪ್ರಮುಖರು ಉಪಸ್ಥಿತರಿದ್ದರು ಈ ಉತ್ತಮ ಕಾರ್ಯಕ್ಕೆ ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಪರವಾಗಿ ಅಗ್ನಿಶಾಮಕ ಇಲಾಖೆಗೆ ಅಭಿವಂದನೆಗಳು ತಿಳಿಸಿದರು ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ