ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ – ಕನ್ನಡ ರಸ ಪ್ರಶ್ನೆ ಕಾರ್ಯಕ್ರಮ.
ಮುದ್ದೇಬಿಹಾಳ ಆ.19

ತಾಲೂಕ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಗಸ್ಟ್ 23 ಶನಿವಾರ ದಂದು ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ರಸ ಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನ ಎಲ್ಲಾ ಸರಕಾರಿ ಮತ್ತು ಅನುದಾನಿತ ಎಲ್ಲ ಪ್ರೌಢ ಶಾಲೆಯ ಮುಖ್ಯ ಗುರುಗಳು ತಮ್ಮ ಶಾಲೆಯ ವತಿಯಿಂದ 3 ವಿದ್ಯಾರ್ಥಿ ಗಳೊಂದಿಗೆ ಆಗಮಿಸಿ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೇಕು. ಅಗಸ್ಟ್ 20 ಸಾಯಂಕಾಲ 5 ಗಂಟೆ ಯೊಳಗೆ ಕ.ಸಾ.ಪ ಸಂಘಟನಾ ಕಾರ್ಯದರ್ಶಿಯಾದ ಹುಷೆನ್ ಮುಲ್ಲಾ ಅವರಿಗೆ ಸಂಪರ್ಕಿಸಿ ಹೆಸರು ನೊಂದಾಯಿಸ ಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನವನ್ನು ನೀಡಲಾಗುವುದು. ಪ್ರೌಢ ಶಾಲಾ ವಿದ್ಯಾರ್ಥಿಗಳ ಪಠ್ಯಕ್ರಮ ಬುದ್ದಿ ಮಟ್ಟವನ್ನು ಆಧರಿಸಿ ಪ್ರಚಲಿತ ಕನ್ನಡ, ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಹಾಗೂ ಕರ್ನಾಟಕಕ್ಕೆ ಸಂಬಂದಿಸಿದ ಕುರಿತು ವಿಷಯ ಇರುತ್ತದೆ. ವಿಷಯವಾರು ಗಣಿತ, ವಿಜ್ಞಾನದ ಪ್ರಶ್ನೇಗಳು ಇರುವುದಿಲ್ಲ ಎಂದು ಮುದ್ದೇಬಿಹಾಳ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಾಮರಾಜ ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ:ಜಿ.ಎನ್ ಬೀರಗೊಂಡ (ಮುತ್ತು) ಮುದ್ದೇಬಿಹಾಳ(ಢವಳಗಿ).