ಆಗಷ್ಟ 29 ಕ್ಕೆ “ಸಿಂಹ ರೂಪಿಣಿ” – ಬಿಡುಗಡೆ.
ಬೆಂಗಳೂರು ಆ.20

ಕೆ.ಜಿ.ಎಫ್ ,ಸಲಾರ್, ಕಬ್ಜ, ಭೈರತಿ ರಣಗಲ್ ಮೊದಲಾದ ಚಿತ್ರಗಳಿಗೆ ಹಾಡು ಬರೆದ ಖ್ಯಾತ ಸಾಹಿತಿ, ಕಿನ್ನಾಳ ರಾಜ್ ನಿರ್ದೇಶನದ “ಸಿಂಹ ರೂಪಿಣಿ” ಚಿತ್ರವು ಆಗಸ್ಟ್ 29 ಕ್ಕೆ ತೆರೆ ಕಾಣಲಿದ್ದು ಪ್ರೇಕ್ಷಕರು ಚಿತ್ರವನ್ನು ನೋಡುವಂತೆ ಜನಪ್ರಿಯ ಬರಹಗಾರ, ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ಹೇಳಿದರು. ಚಿತ್ರವು ಮಾರಮ್ಮ ದೇವಿಯ ಕುರಿತಾಗಿದ್ದು. ಕಾಂತಾರ ಚಿತ್ರದಂತೆ ಇಲ್ಲೂ ಕೂಡ ದೈವ ಶಕ್ತಿಯಿದೆ. ಈ ಚಿತ್ರವು ಸಹ ಎಲ್ಲರಿಗೂ ಇಷ್ಟ ಆಗುತ್ತದೆ. ಚಿತ್ರ ಮಂದಿರಕ್ಕೆ ಬಂದು ಅಮ್ಮನ ಮಹಿಮೆಗಳನ್ನು ನೋಡಿರಿ ಎಂದು ಆರ್.ಚಂದ್ರು ತಂಡದ ಪರವಾಗಿ ಮಾತನಾಡಿದರು. ಚಿತ್ರದ ಕೆಲ ದೃಶ್ಯಗಳನ್ನ, ಹಾಡುಗಳನ್ನು ನೋಡಿ, ತುಂಬಾ ಇಷ್ಟ ಪಟ್ಟು ಮೆಚ್ಚುಗೆಯ ಮಾತನಾಡಿದರು. ಮಾರಮ್ಮನಿಗೆ ಕೋಣ ಬಲಿ ಕೊಡುವ ಪದ್ಧತಿ ಯಾಕಿತ್ತು ? ಅದರ ಹಿನ್ನಲೆ ಏನು? ಎನ್ನುವುದನ್ನು ‘ಸಿಂಹ ರೂಪಿಣಿ’ ಚಿತ್ರದಲ್ಲಿ ತೋರಿಸಲಾಗಿದೆ. ಜಸ್ಕರಣ್ ಹಾಡಿರುವ “ಬಂಗಾರದ ಗೊಂಬೆ ಬಂದು ಎದುರು ನಿಂತರೆ” ಹಾಡು ಸೂಪರ್ ಹಿಟ್ ಆಗಿದ್ದು. ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು. ಕೆ.ಜಿ.ಎಫ್ ಚಿತ್ರದ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ವಿಶೇಷ ಹಾಡಿನಲ್ಲಿ ಕಾಣಿಸಿ ಕೊಂಡಿದ್ದು ಇದು ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನಬಹುದು. ಸಾಗರ್, ಅಂಕಿತಾ ಯಶ್ ಶೆಟ್ಟಿ, ದಿವ್ಯಾ ಆಲೂರ್, ಯಶಸ್ವಿನಿ ಹರೀಶ್ ರಾಯ್, ದಿನೇಶ್ ಮಂಗಳೂರ್, ವಿಜಯ್ ಚೆಂಡೂರ್, ಖುಷಿ ಬಸ್ರೂರ್, ತಬಲಾ ನಾಣಿ, ನಿನಾಸಂ ಅಶ್ವಥ್, ಪುನೀತ್ ರುದ್ರನಾಗ್, ಭಜರಂಗಿ ಪ್ರಸನ್ನ, ಸುನಂದಾ ಕಲ್ಬುರ್ಗಿ, ನವಾಜ್, ಲೋಹಿತ್, ಮನಮೋಹನ್ ರೈ. ಶಶಿಕುಮಾರ್, ಮಲ್ಲಿಕ್, ಜೋತೆಗೆ ತೆಲುಗಿನ ಹಿರಿಯ ನಟ ಸುಮನ್ ತಲ್ವಾರ್, ತಮಿಳಿನ ಸಾಯಿದಿನ ಮುಖ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಅರವತ್ತಕ್ಕೂ ಹೆಚ್ಚಿನ ದೊಡ್ಡ ತಾರಾಗಣ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಗೀತ ನಿರ್ದೇಶನ ಆಕಾಶ ಪರ್ವ, ಛಾಯಾ ಗ್ರಹಣ ಕಿರಣ್ ಕುಮಾರ್, ಸಂಕಲನ ವೆಂಕಿ ಯು.ಡಿ.ವಿ.ಡಿ ಟಿ.ಎಸ್. & ಸೌಂಡ್ ಎಫೆಕ್ಟ್ಸ್ ನಂದು ಜೆ. (ಕೆ ಜಿ ಎಫ್.) ಡಿ.ಐ ಕಿಶೋರ್ ಅಕ್ಕನ್ನ, ಕಲಾ ನಿರ್ದೇಶನ ಪ್ರಭು ಬಡಿಗೇರ್, ಪತ್ರಿಕಾ ಸಂಪರ್ಕ ಆರ್.ಚಂದ್ರ ಶೇಖರ್, ಡಾ,ಪ್ರಭು ಗಂಜಿಹಾಳ್, ಡಾ, ವೀರೇಶ್ ಹಂಡಿಗಿ, ಪ್ರಚಾರ ಕಲೆ ಚೇತು ಡಿಸೈನ್ ಅವರದಿದೆ. ಕಲ್ಯಾಣ ಕರ್ನಾಟಕದ ಪ್ರತಿಭೆ ಕೊಪ್ಪಳದ ಕಿನ್ನಾಳರಾಜ್ ಚಿತ್ರಕತೆ. ಸಂಭಾಷಣೆ. ಹಾಡುಗಳನ್ನ ಬರೆದು ಚಿತ್ರ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕ ಕೆ.ಎಂ ನಂಜುಂಡೇಶ್ವರ ಅವರು ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಲಾಂಚನದಡಿ ಚಿತ್ರ ನಿರ್ಮಿಸಿದ್ದಾರೆ.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

