ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆಯನ್ನು – ಈಡೇರಿಸುವಂತೆ ಪ್ರತಿಭಟನೆ ನಡೆಸಿದರು.
ಕಲಬುರಗಿ ಆ.20

ಹಡಪದ ಅಪ್ಪಣ್ಣ ಸಮಾಜದ ನಾನಾ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ತಿಮ್ಮಾಪೂರ ಸರ್ಕಲ್ ದಿಂದ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಮಳೆಯಲ್ಲಿ ಕಾಲ್ನಡಿಗೆಯಲ್ಲಿ ನಡೆದು ಕೊಂಡು ಹೋರಾಟ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮುಖಾಂತರ (ಹೆಚ್ಚುವರಿ) ತಹಶೀಲ್ದಾರ ಶ್ರೀ ಉಮಾಕಾಂತ ಹಳ್ಳಿಕಟ್ಟೆ ಸರ್ ಸಮ್ಮುಖದಲ್ಲಿಯೇ ರಾಜ್ಯದ ಸಿ.ಎಮ್ ಸಿದ್ರಾಮಯ್ಯ ನವರಿಗೆ, ಮತ್ತು ಸಮಾಜ ಕಲ್ಯಾಣ ಸಚಿವರಿಗೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಂಗಾರು ಅಧಿವೇಶನದಲ್ಲಿ ನಮ್ಮ ಸಮಾಜದ ಬಗ್ಗೆ ಧ್ವನಿಯಾಗಿ ಮಾತನಾಡುವ ಮೂಲಕ ಈ ಸಮುದಾಯದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲು ಒತ್ತಡ ಹೇರುವಂತೆ ಮುಂಗಾರು ಅಧಿವೇಶನ ಸದನದಲ್ಲಿ ಹಡಪದ ಅಪ್ಪಣ್ಣ ಸಮಾಜದ ನಾನಾ ವಿಷಯ ಬಗ್ಗೆ ಪ್ರತಿ ಧ್ವನಿ ಎತ್ತಿ ಮಾತನಾಡಿ ಅನೇಕ ಸಮಾಜದ ಬೇಡಿಕೆಗಳು ಈಡೇರಿಸಿ ಎಂದು ಮನವಿ ಪತ್ರ ಸಮಾಜದ ಬಂಧುಗಳ ಸಮ್ಮುಖದಲ್ಲಿ ಸಲ್ಲಿಸಲಾಯಿತು.ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು 50 ಕೋಟಿ ರೂ. ಮೀಸಲಿಡಬೇಕು, ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಸಣ್ಣ ಸಣ್ಣ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಮತ್ತು ಕಲಬುರಗಿ ಜಿಲ್ಲೆಯ ಸಮುದಾಯ ಭವನ ಕಟ್ಟಡ ಕ್ಕೆ 50 ಲಕ್ಷ ರೂ, ಮೀಸಲಿಡಬೇಕು, ಹಾಗೇಯೇ ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಇರುವ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠ ಪ್ರತ್ಯೇಕ ಕಟ್ಟಡಕ್ಕೆ 1 ಕೋಟಿ ನೀಡಬೇಕು, ಮತ್ತು ಬಸವ ಕಲ್ಯಾಣದಲ್ಲಿ ಇರುವ ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ (ಗವಿಯನ್ನು) ಬಿ.ಕೆ.ಡಿ.ಬಿ ಗೆ ಸೇರ್ಪಡೆ ಮಾಡಿ ಅಭಿವೃದ್ಧಿ ಪಡಿಸಬೇಕು, ಹಾಗೇಯೇ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಬರುವ ನಿಜಸುಖಿ ಹಡಪದ ಅಪ್ಪಣ್ಣ ನವರ ಜನ್ಮ ಸ್ಥಳ ಮಸಬಿನಾಳ ಹಾಗೂ ನಿಜಮುಕ್ತೆ ಹಡಪದ ಲಿಂಗಮ್ಮ ನವರ ಜನ್ಮ ಸ್ಥಳ ದೇಗಿನಾಳನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವ ಕಾರ್ಯ ಮಾಡಬೇಕು.

ಹಾಗೇ ಬಸವ ಕಲ್ಯಾಣ ತಾಲೂಕಿನ ಅನುಭವ ಮಂಟಪದ ಖಾಯಂ ಸದಸ್ಯರನ್ನಾಗಿ ಶ್ರೀ ಅನ್ನಧಾನಿ ಭಾರತೀ ಅಪ್ಪಣ್ಣ ಸ್ವಾಮಿಗಳು ತಂಗಡಗಿ ಪೂಜ್ಯರಿಗೆ ನೇಮಕಾತಿ ಮಾಡಬೇಕು ಈ ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಯಾವುದಾದರೂ ನಿಗಮ ಮಂಡಳಿ ಅಥವಾ ವಿಧಾನ ಪರಿಷತ್ ಸದಸ್ಯ, ರಾಜ್ಯ ಸಭಾ ಸದಸ್ಯರಾಗಿ ಆಯ್ಕೆ ಮಾಡಬೇಕು. ಮತ್ತು ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ‘ಅಜಾಮ” ಎಂಬ ಪದಕ್ಕೆ ‘ಕಾನೂನು ಪ್ರಕಾರ ಅಟ್ರಾಸಿಟಿ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಡ ಹೇರಲಾಯಿತು. ಈ ಸಂಧರ್ಭದಲ್ಲಿ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಸ್ವಾಮಿಗಳು ಶಹಾಬಾದ ಹಾಗೂ ರಾಜ್ಯ ಮಾಜಿ ಸಂ. ಕಾರ್ಯದರ್ಶಿ ಬಸವರಾಜ ಹಳ್ಳಿ, ಜಿಲ್ಲಾ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಈರಣ್ಣ ಸಿ ಹಡಪದ ಸಣ್ಣೂರ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಹಡಪದ ಕಿರಣಗಿ, ಜಿಲ್ಲಾ ಪ್ರಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್, ಆನಂದ ಖೇಳಗಿ, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಬಗದುರಿ, ಶಿವಾನಂದ ಬಬಲಾದಿ.ಹಾಗೂ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ. ಮತ್ತು ಕಲಬುರಗಿ ತಾಲ್ಲೂಕಾಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ , ಮಲ್ಲಿಕಾರ್ಜುನ ಬನ್ನೂರ,ಕಲಬುರಗಿ ತಾಲ್ಲೂಕು ಕಾರ್ಯದರ್ಶಿ ವಿನೋದ ಅಂಬಲಗಾ, ಸುನೀಲ್ ಬಾಗಹಿಪ್ಫರಗಾ, ಆಳಂದ ತಾಲೂಕಾಧ್ಯಕ್ಷ ಶಂಕರ ಹಡಪದ, ಚಿತ್ತಾಪುರ ತಾಲೂಕಾಧ್ಯಕ್ಷ ರಮೇಶ್ ಕೊಲ್ಲೂರ.ನಾಗರಾಜ ಸಾತನೂರ.ಶಹಾಬಾದ ತಾಲ್ಲೂಕಾಧ್ಯಕ್ಷ ಸಿದ್ರಾಮ ಯಾಗಾಪೂರ. ರಮೇಶ ಕವಲಗಾ, ಶರಣು ಕೊಲ್ಲೂರ, ಮಲ್ಲಿಕಾರ್ಜುನ ಬೆಳಗುಪ್ಪಿ . ಶಂಕರ ಹರವಾಳ, ಶಿವಲಿಂಗ ಶಹಾಬಾದ.ದೂಳಪ್ಪ ಪೇಠಶಿರೂರ.ಶಿವಕುಮಾರ್ ಕೊಳ್ಳಿ. ಮಲ್ಲಿಕಾರ್ಜುನ ಹಡಪದ ರಾಜ್ಜೊಳ್ಳಾ. ಅನಿಲ ಯು ಲೈಕ್.ಗಂಗಾದರ ಬಿದ್ದಾಪೂರ, ವಿಶ್ವ ಅಲ್ಲೂರ ಹಾಗೂ ಸಮಾಜದ ಅನೇಕ ಬಂಧುಗಳು ಭಾಗವಹಿಸಿದರು ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ.ಎನ್ ಅವರು ತಿಳಿಸಿದರು.