ಡಾಂಬರೀಕರಣ ನಡೆದ ಎರಡು ತಿಂಗಳಲ್ಲಿ – ರಸ್ತೆ ಕುಸಿದು ಬಿದ್ದ ಗುಂಡಿ.
ಕೊಟ್ಟೂರು ಆ .20
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ತೂಲಹಳ್ಳಿ ಗ್ರಾಮದ ಹತ್ತಿರ ಕುಸಿದು ಬಿದ್ದ ಡಾಂಬರ್ ರಸ್ತೆ! ಈ ರಸ್ತೆಯಲ್ಲಿ ಗುಂಡಿ ಬೀಳಲು ಕಾರಣವೇನು? ಪಿ.ಬ್ಲ್ಯೂ.ಡಿ ನಿರ್ಲಕ್ಷ್ಯವೋ ಅಥವಾ ಗುತ್ತಿಗೆದಾರರ ನಿರ್ಲಕ್ಷ್ಯವೋ, ಗೊತ್ತಿಲ್ಲಾ ಆದರೆ ಅನುದಾನ ತಂದು ಕೊಟ್ಟ ಶಾಸಕರೋ…..? ಇದಕ್ಕೆ ಹೊಣೆ ಯಾರು? ಎಂಬುದು ಹೆಚ್ಚಿನ ಪ್ರಶ್ನೆಯಾಗಿದೆ. ತೂಲಹಳ್ಳಿ ಯಿಂದ ದಾವಣಗೆರೆ ಮತ್ತು ಚಿತ್ರದುರ್ಗಕ್ಕೆ ಸಂಪರ್ಕ ರಸ್ತೆಯ ಡಾಂಬರೀಕರಣ ಕೇವಲ ಎರಡು ತಿಂಗಳ ಹಿಂದೆ ನಡೆದಿತ್ತು.

ಈ ರಸ್ತೆ ಕಾಮಗಾರಿ ಮಾಡುವಾಗ ಎಲ್ಲಿ ಬ್ರಿಡ್ಜ್ ಹಾಕಬೇಕು ಎಷ್ಟು ತಿಕ್ನೆಸ್ ಬಳಸಬೇಕು ಎಂಬುದು ಮರೆತು ಈ ರೀತಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ತೂಲಹಳ್ಳಿ ಗ್ರಾಮಸ್ಥರಾದ ರೇವಣಸಿದ್ದಪ್ಪ ಅಜಯ್ ಹಾಲೇಶ್ ಮತ್ತಿತರರು ಡಾಕ್ಟರ್. ಎನ್.ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಇವರು ಕರ್ನಾಟಕದಲ್ಲಿ ಶಾಸಕರನ್ನು ಹೋಲಿಸಿದರೆ ಇವರೇ ಮೊದಲಿನವರು.
ಅಭಿವೃದ್ಧಿ ಹರಿಕಾರರು ನೊಂದವರ ಪಾಲಿನ ಕರುಣಾಮಯಿ ಇವರುಗಳು ಇಂತಹ ಕಾಮಗಾರಿ ಅನುದಾನ ತರುವುದಷ್ಟೇ ಅಲ್ಲಾ ಕಳಪೆ ಕಾಮಗಾರಿ ಆಗದಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮುನ್ನೆಚ್ಚರಿಕೆ ನೀಡಬೇಕೆಂದು ಮನವಿ ಮಾಡಿಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು