ಅಮರೇಶ್ವರ ಹೋಗುವ ದಾರಿಯುದ್ಧಕ್ಕೂ ಗಿಡ ಹಚ್ಚುವ ಅಭಿಯಾನ – ಅಮರೇಗೌಡ ಮಲ್ಲಾಪುರ.
ಲಿಂಗಸೂರು ಆ.20

ಶ್ರಾವಣ ಮಾಸದ ಪ್ರಯುಕ್ತ ಗುರಗುಂಟ ಅಮರೇಶ್ವರ ಸುಕ್ಷೇತ್ರಕ್ಕೆ ಭೇಟಿ ನೀಡಿದ ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪು ರವರು ಮತ್ತು ವನಸಿರಿ ತಂಡ ಸುಕ್ಷೇತ್ರ ಅಮರೇಶ್ವರನ ದರ್ಶನ ಪಡೆಯಲಾಯಿತು.ಈ ಸುಕ್ಷೇತ್ರ ಗುರುಗುಂಟ ಅಮರೇಶ್ವರ ದೇವಸ್ಥಾನಕ್ಕೆ ಬರುವ ದಾರಿಯುದ್ದಕ್ಕೂ ಗಿಡ ಹಚ್ಚುವ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು. ಮುಖ್ಯ ರಸ್ತೆ ಅಮರೇಶ್ವರ ಕ್ರಾಸ್ ನಿಂದ ಅಮರೇಶ್ವರ ದೇವಸ್ಥಾನದ ವರೆಗೂ 3 ಕಿ.ಮೀ ಗಿಡ ಹಚ್ಚುವ ಅಭಿಯಾನ ಕೆಲವೇ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಅಮರೇಶ್ವರ ದರ್ಶನ ಪಡೆದ ನಂತರ ತಿಳಿಸಿದರು. ಇದಕ್ಕೆ ವನಸಿರಿ ತಂಡದ ಸಂಪೂರ್ಣ ಸಹಕಾರ ಪಡೆಯಲಾಗುವುದು ಮತ್ತು ಸ್ಥಳೀಯರ ಸಹಕಾರವನ್ನು ಪಡೆಯಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅರ್ಚಕರಾದ ಗುರುಮೂರ್ತಿಯ್ಯ ಹಿರೇಮಠ, ಶಿಕ್ಷಕರಾದ ನಾಗರಾಜ ಮಾಂಡ್ರೆ, ವನಸಿರಿ ತಂಡದ ಸದಸ್ಯರಾದ ರುದ್ರಗೌಡ, ಮಂಜುನಾಥ ಪಟೇಲ್, ದುರ್ಗೇಶ DSP ಉಪಸ್ಥಿತರಿದ್ದರು.