ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಕಾಲೇಜುಗಳಿಂದ ಆಗಮಿಸಿ ನಿರೀಕ್ಷೆಗೂ ಮೀರಿದ ಅಭೂತಪೂರ್ವ ಬೆಂಬಲಕ್ಕೆ – ಪ್ರತಿಯೊಬ್ಬ ವಿದ್ಯಾರ್ಥಿಗೆ ಹೃದಯಸ್ಪರ್ಶಿ ಕೃತಜ್ಞಗಳು.
ಮಾನ್ವಿ ಆ.20


ಸುಮಾರು 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯುವ ಕಾಂಗ್ರೆಸ್ ಸಮಿತಿ ಮಾನ್ವಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮಕ್ಕೆ ಮಾನ್ವಿ ತಾಲೂಕಿನ ವಿವಿಧ ಕಾಲೆಜುಗಳಿಂದ ಆಗಮಿಸಿ ನಿರೀಕ್ಷೆಗೂ ಮೀರಿ ಅಭೂತ ಪೂರ್ವ ಬೆಂಬಲ ಕೊಟ್ಟ ಪ್ರತಿಯೊಬ್ಬ ವಿದ್ಯಾರ್ಥಿಗೆ ಹೃದಯ ಪೂರ್ವ ಕೃತಜ್ಞತೆಗಳು ಜೊತೆಗೆ ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣೀಭೂತರಾದ ಎಲ್ಲಾ ಯುವ ಕಾಂಗ್ರೇಸ್ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಮತ್ತು ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ, ಹಿರಿಯ ಮುಖಂಡರಿಗೆ, ಮಹಿಳಾ ಘಟಕದ ಅಧ್ಯಕ್ಷರಿಗೆ, ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ, ವಿಶೇಷವಾಗಿ ಸಂಡುರಿನಿಂದ ಆಗಮಿಸಿ ಕ್ರಾಂತಿ ಗೀತೆಗಳನ್ನ ಹಾಡಿ ವಿದ್ಯಾರ್ಥಿಗಳಿಗೆ ಬಡಿದ್ದೆಬ್ಬಿಸಿದ ಶರಣು, ಪ್ರಗತಿಗೆ, ಮೌಲ್ಯ ಮಾಪನ ಮಾಡಿದ ಎಲ್ಲಾ ಶಿಕ್ಷಕರಿಗೆ, ಪತ್ರಿಕಾ ಮತ್ತು ಮಾಧ್ಯಮ ಮಿತ್ರರಿಗೆ ಮತ್ತು ಉಪಸ್ಥಿತರಿದ್ದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳನ್ನ ಕೋರುತ್ತೇವೆ.

ವಿಜೇತ ವಿದ್ಯಾರ್ಥಿಗೆ
1. 1st price : 15,000/-ಶ್ವೇತಾ(ಭಾಷುಮಿಯ ಡಿಗ್ರಿ ಕಾಲೇಜು, ಮಾನ್ವಿ)
2. 2nd price : 10,000/-ಅಂಜುಮ್.ಫಾತಿಮಾ(ಲೊಯೋಲಾ ಡಿಗ್ರಿ ಕಾಲೇಜು,ಮಾನ್ವಿ)
3. 3rd price: 5,000/-ಭೀಮಮ್ಮ ರವರು
ಈ ರೀತಿಯಾಗಿ ಆಯ್ಕೆಯಾಗಿ ಶಾಲಾ ಕಾಲೇಜಿಗೆ ಹಾಗೂ ಪಟ್ಟಣದ ಯುವ ಪೀಳಿಗೆಗೆ ಮಾದರಿ ಯಾಗಿ ತಾಯಿ ತಂದೆಗಳಿಗೆ ಹರ್ಷ ಮತ್ತು ಕೀರ್ತಿ ತಂದ ಇವರನ್ನು ಸ್ವಾಗತಿಸಿ ಅಭಿನಂದಿಸಿದ್ದು ಅತ್ಯಂತ ಯಶಸ್ವಿ ಕಾರ್ಯ ಆಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ