ತಾರಾಪೂರ ಗ್ರಾಮಕ್ಕೆ ನೂತನ – ಬಸ್ಸು ಪ್ರಾರಂಭ.
ತಾರಾಪೂರ ಆ.20
ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಿಂದ ಬೆಳಿಗ್ಗೆ 06:00 ಘಂಟೆಗೆ ಮತ್ತು 09:30 ಆಲಮೇಲಕ್ಕೆ ಬಸ್ಸು ಇರುತ್ತಿದ್ದು. ಮಧ್ಯಾಹ್ನದ ಹೊತ್ತಿಗೆ ಆಲಮೇಲ ದಿನ ಬರುವಲ್ಲಿ ಶಾಲೆಯ ಮಕ್ಕಳಿಗೆ ಹಾಗೂ ಪ್ರಯಾಣಿಕರಿಗೆ ಬಹಳ ತೊಂದರೆ ಆಗುತ್ತಿತ್ತು ಅದನ್ನು ಗಮನಿಸಿ ಗ್ರಾಮಸ್ಥರ ಮನವಿಯ ಮೇರೆಗೆ ವಿಜಯಪುರ ಜಿಲ್ಲಾ ಕೆ.ಎಸ್.ಆರ್.ಟಿ.ಸಿ ಡಿ.ಟಿ.ಓ ಅವರು ಹಾಗೂ ಸಿಂದಗಿ ಘಟಕದ ಮ್ಯಾನೇಜರ ಇವರು ಇಂದು ದಿನಾಂಕ 20/8/2025 ರಂದು ಸಿಂದಗಿ ದಿಂದ ಮಧ್ಯಾಹ್ನ 02:00 ಘಂಟೆಗೆ ಸಿಂದಗಿ ದಿಂದ ಆಲಮೇಲ ತಾರಾಪೂರ ಗ್ರಾಮಕ್ಕೆ ವ್ಹಾಯ್ ಮಾಡಿಕೊಂಡು ತಾವರಖೇಡ ಗ್ರಾಮಕ್ಕೆ ಹೋಗುವ ಬಸ್ಸು ಇಂದು ಪ್ರಾರಂಭಿಸಿದರು.

ಇಂದು ಬಸ್ಸಿಗೆ ಪೂಜೆ ಮಾಡಿ ಗ್ರಾಮಸ್ಥರು ಬರಮಾಡಿ ಕೊಂಡರು ಇದೆ ಸಂದರ್ಭದಲ್ಲಿ ಸಾತನಗೌಡ ಬಿರಾದಾರ ವಿಜಯಪುರ ಜಿಲ್ಲಾ ಕೆ.ಎಸ್.ಆರ್.ಟಿ.ಸಿ ಡಿ.ಟಿ.ಓ ಅವರಿಗೂ ಹಾಗೂ ಸಿಂದಗಿ ಘಟಕದ ಮ್ಯಾನೇಜರ ಅವರಿಗೂ ಅಭಿನಂದಿಸಿದರು. ಹಂಪಯ್ಯ ಮಠ ಷಣ್ಮುಖ ಕಿಣಗಿ ಮಲ್ಕಪ್ಪ ಕುಂಬಾರ ದುಂಡಪ್ಪ ಮಾಶಾಳ ಶರಣು ಕಿಣಗಿ ಯಶವಂತ ಹರಿಜನ್ ಪರಶುರಾಮ ಸಿಂಗೆ ಯಮನಪ್ಪ ಹರಿಜನ ಹಾಗೂ ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ