ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿ. ನುಡಿದಂತೆ ನಡೆಯಲು ಆಗ್ರಹಿಸಿ – ಪ್ರತಿಭಟನಾ ಧರಣಿ.
ಬೆಂಗಳೂರು ಅಕ್ಟೋಬರ್.31

ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ನ್ಯಾಯಮೂರ್ತಿ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದು, ಅದನ್ನು ಕೇಂದ್ರಕ್ಕೆ ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆ ಮಾಡಲು ಸೂಕ್ತ ಶಿಫಾರಸ್ಸನ್ನ ಮಾಡಲು ಆಗ್ರಹಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.

ಸ್ಥಳಕ್ಕೆ ಸರ್ಕಾರದ ಪರವಾಗಿ ಆಗಮಿಸಿದ ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಶ್ರೀ ಡಾ. ಎಚ್. ಸಿ. ಮಹದೇವಪ್ಪನವರು ಮನವಿಯನ್ನ ಸ್ವೀಕರಿಸಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು, ಸಂಪುಟದ ಸಚಿವರು ಹಾಗೂ ಪರಿಶಿಷ್ಟ ಜಾತಿಗಳ ಶಾಸಕರೊಂದಿಗೆ ಚರ್ಚಿಸಿ ಮತ್ತು ಸಂಘಟನೆಯ ಮುಖಂಡರೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ 10 ಲಕ್ಷಕ್ಕೂ ಮೇಲ್ಪಟ್ಟು ಇರುವ ಸಮಗಾರ ಹರಳಯ್ಯ ಸಮಾಜಕ್ಕೆ ಪ್ರತ್ಯೇಕವಾದಂತಹ ಅಭಿವೃದ್ಧಿ ನಿಗಮವನ್ನು ರಚಿಸಬೇಕು ಎಂದು ಸಮಾಜದ ಪ್ರಮುಖ ವೈ.ಸಿ. ಕಾಂಬಳೆ ಒತ್ತಾಯಿಸಿದರು.

ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿ ಅತಿ ಶೀಘ್ರದಲ್ಲಿ ಸರ್ಕಾರ ಈ ಕುರಿತು ಪರಿಶೀಲ ನಡೆಸಿ ಅನುಷ್ಠಾನಗೊಳಿಸುವ ಭರವಸೆ ನೀಡಿದರು. ಇನ್ನುಳಿದಂತೆ ಕಾಂತರಾಜ್ ಆಯೋಗದ ವರದಿಯನ್ನು ಬಹಿರಂಗಪಡಿಸುವುದು ಮತ್ತು ವಿವಿಧ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಹೆಚ್ಚಳ ಮಾಡುವುದು ಮತ್ತು ಪ್ರತ್ಯೇಕ ಅಲೆಮಾರಿ ಬುಡಕಟ್ಟು ಆಯೋಗವನ್ನು ರಚಿಸುವುದು ಇನ್ನಿತರ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಯಿತು. ಈ ಪ್ರತಿಭಟನ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಹಿರಿಯೂರಿನ ಆದಿ ಜಾಂಬವ ಮಠದ ಶ್ರೀ ಶ್ರೀ ಷಡಕ್ಷರಮುನಿ ಮಹಾಸ್ವಾಮಿಗಳು ವಹಿಸಿದ್ದರು. ಪ್ರಧಾನ ಸಂಚಾಲಕರಾದ ಬಸವರಾಜ ಕೌತಾಳ, ಹಿರಿಯ ದಲಿತ ಮುಖಂಡರಾದ ಬಿ. ಗೋಪಾಲ್, ಡಿಎಸ್ಎಸ್ ನ ಎನ್ ಮೂರ್ತಿ, ಗಡ್ಡಂ ವೆಂಕಟೇಶ, ವೈ ಸಿ ಕಾಂಬಳೆ, ಶಿವಮೊಗ್ಗದ ಡಿ ಎಸ್ ಎಸ್ ನ ಎಂ ಗುರುಮೂರ್ತಿ, ಬಿಎಸ್ಪಿಯ ಎಂ ಗುರುಮೂರ್ತಿ, ಅಲೆಮಾರಿಗಳ ಸಂಘಟನೆಯಿಂದ ಸಣ್ಣ ರಾಮಣ್ಣ ಮುಂತಾದವರು ಭಾಗವಹಿಸಿದ್ದರು.