ಸೂಲಗಿತ್ತಿ ತಳುಕಿನ ತಿಮ್ಮಕ್ಕಗೆ ತಾಲೂಕಾ – ಆಡಳಿತ ದಿಂದ ಸನ್ಮಾನ.
ಚಳ್ಳಕೆರೆ ಆ.21

ತಾಲೂಕಿನ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಐವತ್ತು ವರ್ಷಗಳ ಕಾಲ ಸೂಲಗಿತ್ತಿಯಾಗಿ ಸಾವಿರಾರು ಸಹಜ ಹೆರಿಗೆ ಮಾಡಿಸಿದ ನಿಸ್ವಾರ್ಥ ಸೇವೆಯನ್ನು ತಾಲೂಕಾ ಆಡಳಿತ ಗುರುತಿಸಿ ಬಿ.ಎಂ.ಜಿ.ಹೆಚ್.ಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ 79 ನೇ. ಸ್ವಾತಂತ್ರ್ಯ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತದ ಶಾಸಕ ಟಿ.ರಘುಮೂರ್ತಿ, ತಾಲೂಕಾ ದಂಡಾಧಿಕಾರಿ ರೇಹಾನ್ ಪಾಷಾ, ನಗರ ಸಭಾ ಅಧ್ಯಕ್ಷೆ ಶಿಲ್ಪಾ ಮುರಳೀಧರ್, ನಗರ ಸಭೆಯ ನಾಮನಿರ್ದೇಶಿತ ಸದಸ್ಯ ನೇತಾಜಿ ಪ್ರಸನ್ನ, ಸಮಾಜ ಸೇವಕರು, ಯತೀಶ್.ಎಂ ಸಿದ್ದಾಪುರ, ಶಬ್ರಿನಾ ಮಹಮ್ಮದ್ ಅಲಿ, ಕಾಲುವೆಹಳ್ಳಿ ಪಾಲಕ್ಕ, ಶ್ರೀನಿವಾಸ್ ಸೇರಿದಂತೆ ವಿವಿಧ ಗಣ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.