ನೂತನ ಎಸ್.ಡಿ.ಎಂ.ಸಿ ಸದಸ್ಯರಿಗೆ – ಶಾಲಾ ಶಿಕ್ಷಕರಿಂದ ಸನ್ಮಾನ.
ಇಂಡಿ ಆ.22

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಗ್ಗಿಹಳ್ಳಿಯಲ್ಲಿ 2025 ನೇ. ಸಾಲಿನಲ್ಲಿ ಹೊಸದಾಗಿ ರಚಿತವಾದ ಎಸ್.ಡಿ.ಎಂ.ಸಿ ಯ ಅಧ್ಯಕ್ಷರು ಶ್ರೀ ಶೇಖರಬಾಬು.ಮ ಹೊಸಮನಿ ಉಪಾಧ್ಯಕ್ಷರು ಶ್ರೀಮತಿ ಹಮಿದಾ ಜಾಕೀರ್ ಮುಜಾವಾರ ರವರನ್ನು ಹಾಗೂ ಎಲ್ಲಾ ಸದಸ್ಯರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು, ಮುಖ್ಯ ಶಿಕ್ಷಕರಾದ ಎ.ಎಂ ಮುಲ್ಲಾ ಮಾತನಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆಗ್ಗಿಹಳ್ಳಿ ಉನ್ನತಿಕರಸಿದ ಪ್ರೌಢ ಶಾಲೆಯಾಗಿ ಸರಕಾರ ಅಧಿಕೃತವಾಗಿ ಮಂಜೂರು ಮಾಡಿದ್ದು, ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೇಳಿ ಕೊಂಡರು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಶ್ರೀಮತಿ ಯಮುನಾಬಾಯಿ ನಂದ್ಯಾಳ, ಶ್ರೀ ಮಲ್ಲಿಕಾರ್ಜುನ ಲಾಳ ಸಂಗಿ, ಶ್ರೀ ಉದಯಚಂದ್ರ ಹಾಗೂ ಎಸ್.ಡಿ.ಎಂ.ಸಿ ಸರ್ವ ಸದಸ್ಯರು ಹಾಜರಿದ್ದರು ಶ್ರೀ ಶಿವಾನಂದ ಡಬ್ಬಿಗಾರ ಶಿಕ್ಷಕರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ