ಪೋಲಿಸ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ ಮಿಲಾದ್ – ಪ್ರಯುಕ್ತ ಶಾಂತಿ ಸಭೆ.
ಇಲಕಲ್ಲ .23

ಬಾಗಲಕೋಟ ಜಿಲ್ಲಾ ಪೋಲಿಸ ವತಿಯಿಂದ ಇಳಕಲ್ಲ ಪೋಲಿಸ ಠಾಣೆಯಲ್ಲಿ ಶಾಂತಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಅಂಜುಮನೆ ಇಸ್ಲಾಮ್ ಸಂಸ್ಥೆ ಸದಸ್ಯ ಮುಹ್ಮದ ಆರೀಫ್ ಫಣಿಬಂದ ಮಾತನಾಡಿ “ಈದ ಮೀಲಾದ ಪ್ರಯುಕ್ತ ಪ್ರವಾದಿ (ಸ) ಜನ್ಮ ದಿನಾಚರಣೆಯ ಅಂಗವಾಗಿ ಪ್ರಭಾತ ಪೇರಿ ಮೆರವಣಿಗೆಯೂ ಮುಖ್ಯ ರಸ್ತೆಯಲ್ಲಿ ಶಾಂತಿಯುತವಾಗಿ ಹೊರಡುವುದು, ಪೋಲಿಸ ಇಲಾಖೆಯ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದರು”
ಎಮ್.ಆರ್ ಪಾಟೀಲ ಮಾತನಾಡಿ “ಇಳಕಲ್ಲ ನಗರವು ಶಾಂತಿ ಸೌಹಾರ್ದತೆ ಹೆಸರು ಪಡೆದಿದ್ದು ಎಲ್ಲಾ ಹಬ್ಬಗಳಂತೆ ಈ ಗಣೇಶ ಹಬ್ಬವೂ ಕೂಡಾ ಹಿಂದೂ ಮುಸ್ಲಿಮರೆಲ್ಲರೂ ಶಾಂತಿಯುತವಾಗಿ ಸೇರಿ ಆಚರಿಸುತ್ತೇವೆ ಎಂದರು”

ನಗರ ಸಭೆಯ ಪೌರಾಯುಕ್ತ ಶ್ರೀ ನಿವಾಸ ಜಾಧವ “ಗಣೇಶ ಪ್ರತಿಮೆಗಳು ಮಣ್ಣಿನಿಂದ ತಯಾರಿಸಬೇಕು, ಪಿ.ಓ.ಪಿ ಯಿಂದ ತಯಾರಾದ ಗಣೇಶ ಪ್ರತಿಮೆಗಳು ಯಾರು ಬಳಸಬಾರದು, ನಗರದ ಮೂರು ಕಡೆಗಳಲ್ಲಿ ವಿಸರ್ಜನೆಗೆ ಅವಕಾಶ ಮಾಡಿ ಕೊಡಲಾಗಿದೆ, ಮತ್ತು ಇದಕ್ಕಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು”
ತಾಲೂಕಾ ದಂಡಾಧಿಕಾರಿ ಈಶ್ವರ ಗಡ್ಡಿ ಮಾತನಾಡಿ “ಪಟಾಕಿ ಮತ್ತು ಸಿಡಿಮದ್ದಿನ ಅಂಗಡಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳಲಾಗುವುದು ಎಂದರು”

ಸಭೆಯ ಅಧ್ಯಕ್ಷತೆ ವಹಿಸಿದ ಡಿ.ವೈ.ಎಸ್.ಪಿ ವಿಶ್ವನಾಥ ಕುಲಕರ್ಣಿ ಮಾತನಾಡಿ “ಡಿ.ಜೆ ಬಳಸಲು ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ, ಅದಕ್ಕಾಗಿ ಸಾವಿರಾರು ಹಣ ವ್ಯರ್ಥ ಮಾಡುವ ಬದಲು ಅನಾಥಾಶ್ರಮಗಳಿಗೆ ಮತ್ತು ಹಾಸ್ಟೇಲ್ ವಿದ್ಯಾರ್ಥಿಗಳ ಊಟಕ್ಕಾಗಿ ಖರ್ಚು ಮಾಡಿದರೆ ಪುಣ್ಯ ಸಂಪಾದಿಸಬಹುದು ಇದರಿಂದ ಸಮಾಜಕ್ಕೂ ಪ್ರಯೋಜನವಾಗುವುದು ಎಂದರು”
ಸಭೆಯಲ್ಲಿ ಸಿ.ಪಿ.ಐ ಸುನೀಲ್ ಸೌದಿ, ಶಹರ ಪಿ.ಎಸ್.ಐ ಮಂಜುನಾಥ ಪಾಟೀಲ, ಗ್ರಾಮೀಣ ಪಿ.ಎಸ್.ಐ ಕ್ರೈಂ ಪಿ.ಎಸ್.ಐ, ಹೆಸ್ಕಾಂ ಅಧಿಕಾರಿಗಳು ಅಗ್ನಿಶಾಮಕ ದಳ ಅಧಿಕಾರಿಗಳು, ಗಣ್ಯರಾದ ಮುಹ್ಮದ ಹಾಶೀಮ ಬಿಳೇಕುದರಿ, ಡಾ, ಟಿಪ್ಪು ಭಂಡಾರಿ, ಬಾಗವಾನ ಕಂಡಕ್ಟರ್, ಮಹಾಂತೇಶ ಗೊರಜನಾಳ, ಯಲ್ಲಪ್ಪ ಪೂಜಾರಿ, ಅಬ್ದುಲ್ ಗಫಾರ ತಹಶೀಲ್ದಾರ, ಬುಡ್ಡಾ ಗುಳೇದ, ಮತ್ತು ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಅಬ್ದುಲ್.ಗಫಾರ್.ತಹಶೀಲ್ದಾರ್.ಇಲಕಲ್ಲ