“ಅರಿತವನೇ ಅರಸ ಬೆರೆತವನೇ ಸ್ನೇಹಿತ”…..

ಆಸೆಗಳೇ ಆಘಾತ ಬಾಷೆಯೇ ಸುಕಾಂತ
ಇಂದಿನ ಕ್ಷಣಗಳೇ ಸುಖಕರ ಮುಂದೆ
ಬರುವದು ಆಹಾಕಾರ
ಈ ಜನ್ಮದಲ್ಲೆ ಜನನ ಮರಣ ಶಾಸನ
ಉತ್ತಮ ಯಾವುದಾದರೇನು ಪಾಲಿಸು
ಊರಿಗೆ ಹಿರಿಯನಾದರೂ ಹೆಂಡತಿಗೆ ಕೋಲು
ಋಣ ಇದ್ದರೆ ಕ್ಷಣ ಎಂಥ ಮನಸ್ಸು ಸೊಗಸಿಗೆ
ಶೃಂಗಾರ
ಏತಕೆ ನರಳುವೇ ಮನವೆ ದಿನದಿನವು
ಅರಳುವ ಕಲೆಯಿರಲಿ
ಐಶ್ವರ್ಯ ಎಷ್ಟಿದ್ದರೇನು ನೀನು ಒಬ್ಬಂಟಿಗನೆ
ಓಡುವುದು ನಿಲ್ಲಲೇಬೇಕು ನಿಂತದ್ದು
ಓಡುವುದು ಕಠಿಣ
ಔಷಧಿ ಮಿತವಿದ್ದರೇ ಹಿತ ಮಕ್ಕಳು ಮಾತು
ಕೇಳಿದರೆ ಸುಖ
ಅಂದದ ಬದುಕಿಗೆ ಶ್ರಮ ಮುಖ್ಯ ಸಮಯಕ್ಕೆ
ಸ್ಪಂದಿಸುವವನ ಸಖ್ಯ
ಅಃ ಆಹ್ಲಾದಕರ ಜೀವನುತ್ಸಾಹದ ಕುರೂಹು
ಅಂದಕಾರ ಅಹಂಕಾರ ಮಾನವನ ನಾಶಕ್ಕೆ
ಮುನ್ನುಡಿ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

