ಮೊಸಳೆ ದಾಳಿಗೆ ತುತ್ತಾಗಿ ತತ್ತರಿಸಿದ ರೈತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರಕ್ಕೆ – ಮಾಜಿ ಶಾಸಕ ನಡಹಳ್ಳಿ ಯವರಿಂದ ಆಗ್ರಹ.
ಕುಚಗನೂರ ಆ.24

ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದಲ್ಲಿ ಮೊಸಳೆ ದಾಳಿಗೆ ಒಳಗಾಗಿ ಪ್ರಾಣ ಕಳೆದು ಕೊಂಡಿರುವ ರೈತ ಕಾಶಪ್ಪ ಕಂಬಳಿ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಆಗ್ರಹಿಸಿದರು. ಕುಂಚಗನೂರದ ಪಂಪ ಹೌಸ್ ಬಳಿ ಮೊಸಳೆ ದಾಳಿಗೆ ಬಲಿಯಾದ ರೈತನ ಕುಟುಂಬದವರನ್ನು ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಶಪ್ಪ ಕಂಬಳಿಯವರದ್ದು ಬಡ ರೈತನ ಕುಟುಂಬವಾಗಿದ್ದು ಆತನಿಗೆ ನಾಲ್ವರು ಮಕ್ಕಳಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮೊಸಳೆ ದಾಳಿಗೆ ಜೀವ ಕಳೆದು ಕೊಂಡಿರುವ ಅವರ ಕುಟುಂಬದ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು. ಕೃಷ್ಣಾ ನದಿ ಪಾತ್ರದಲ್ಲಿ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನದಿ ದಂಡೆ ಗ್ರಾಮದ ಜನರಿಗೆ ಪ್ರವಾಹದ ಸಮಯದಲ್ಲಿ ಪೊಲೀಸ್ ಇಲಾಖೆಯವರು ನಿರಂತರವಾಗಿ ಕಣ್ಗಾವಲು ಇರಿಸಬೇಕು. ನದಿಯುತ್ತ ತೆರಳದಂತೆ ಜನರಿಗೆ ಅರಿವು ಮೂಡಿಸಬೇಕು. ಆದರೆ ಘಟನೆ ನಡೆದ ಎರಡೂವರೆ ಗಂಟೆಗಳ ಬಳಿಕ ಪಿ.ಎಸ್.ಐ ಸ್ಥಳಕ್ಕೆ ಬರುತ್ತಾರೆ. ರೈತರು ಠಾಣೆಗೆ ಬಂದು ಕೇಸ್ ಕೊಡಬೇಕು ಎಂದು ಹೇಳುತ್ತಾರೆ. ಮನೆಯ ಸದಸ್ಯನನ್ನು ಕೊಳೆದು ಕೊಂಡಿದ್ದ ರೈತನ ಕುಟುಂಬದವರು ಠಾಣೆಗೆ ಹೋಗಿ ಕೇಸ್ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಮೊಸಳೆಗಳ ಹಾವಳಿ ತಪ್ಪಿಸಲು ಹಿಂದಿನ ಅವಧಿಯಲ್ಲಿ 620 ಕೋಟಿ ರೂ. ಗಳ ಪ್ರಸ್ತಾವನೆಯನ್ನು 40 ಹಳ್ಳಿಗಳಿಗೆ ರಕ್ಷಣೆಗಾಗಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಸಲ್ಲಿಸಲಾಗಿತ್ತು. ಆದರೆ ಈ ಸರ್ಕಾರ ಏನು ಮಾಡುತ್ತಿಲ್ಲಾ ಎಂದು ನಡಹಳ್ಳಿ ದೂರಿದರು. ಮುಖಂಡ ಎನ್.ಎಸ್ ದೇಶಮುಖ. (ಕುಂಚಗನೂರ್) ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ನೀಲಕಂಠಾವ್ ನಾಡಗೌಡ. ಅಶೋಕ್ ರಾಥೋಡ್, ಪ್ರಧಾನ ಕಾರ್ಯದರ್ಶಿ ಸಂಜು ಬಾಗೇವಾಡಿ. ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಾನಂದ ಮಂಕಣಿ. ಸ್ಥಳೀಯ ಮುಖಂಡರು ಗ್ರಾಮಸ್ಥರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

