“ಜಗದಲಿ ಯೋಗಾ ಯೋಗವು ಸುಯೋಗಿಯು”…..

ದ್ವೇಷ ಅಸೂಯೆ ಕೇಡಕು ವಿಚಾರವ
ಮಾಡದಿರುವನೇ ಮಹಾಯೋಗಿಯು
ಶ್ರಮ ದುಡಿಮೆಯಲಿ ನಿತ್ಯವು
ಜೀವನ ಸಾಗಿಸುವವನೇ ಕರ್ಮಯೋಗಿಯು
ತನು ಮನದ ಸುಚಿ ಶುದ್ಧತಯೇ ನಿರೋಗಿಯು
ಬೇರೆಯವರ ಆಗು ಹೋಗುಗಳ
ಬಗ್ಗೆ ಗಮನ ಹರಿಸದವನೇ
ನಿರಾಳಯೋಗಿಯು
ಅಹಂಕಾರ ಬೆದಬಾವ ವಿಲ್ಲದವನೇ
ಜ್ಞಾನಯೋಗಿಯು
ಕಷ್ಟ ಸುಖಗಳಿಗೆ ಧಾವಿಸುವನೇ
ಧರ್ಮಯೋಗಿಯು
ನಡೆ ನುಡಿಯಲಿ ಸತ್ಯತೆಯ
ಸಾಮಿಪ್ಯವ ಒಂದಾಗಿಸುವವನೇ ನಿತ್ಯ
ಯೋಗಿಯು
ನಾನು ಜಗಕೆ ಅನಿವಾರ್ಯವಲ್ಲ
ಎಂಬ ನಿರ್ಮೋಹಿಯೇ ಶಾಂತಯೋಗಿಯು
ಒಳ್ಳೆತನವ ಜಗದಿ ಹಂಚಿ
ನಲಿಯುವವನೇ ಶಿವಯೋಗಿಯು
ಲೌಕಿಕ ಸಂಸಾರದಿ ಸುಖ ದುಃಖ ಅನುಭವಿಸಿ
ಕುಟುಂಬ ರಥ ಎಳೆಯುವ ಮಹಾ
ಭೋಗಿಯು
ಜಗದಲಿ ಸುಪಾತ್ರ ಯೋಗಾ ಯೋಗವು
ಸುಯೋಗಿಯು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.