ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ – ಬೃಹತ್ ಪ್ರತಿಭಟನೆ.
ಕೊಟ್ಟೂರು ಆ.25

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಆಗಸ್ಟ್ ತಿಂಗಳ ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ಕೊಳೆ ರೋಗ ಮಜ್ಜಿಗೆ ರೋಗ ಇನ್ನೂ ಮುಂತಾದ ರೋಗಗಳಿಗೆ ತುತ್ತಾಗಿ ಈರುಳ್ಳಿ ಬೆಳೆಗಾರರು ಸಂಪೂರ್ಣ ಕಂಗಾಲಾಗಿದ್ದಾರೆ. ಆದ ಕಾರಣ ಈರುಳ್ಳಿ ಬೆಳೆಗೆ ಇನ್ಶೂರೆನ್ಸ್ ರೂ: 30,000 ನೀಡಬೇಕು ಹಾಗೂ ಪ್ರತಿಯೊಂದು ತಾಲೂಕಿನಲ್ಲಿ ಈರುಳ್ಳಿ ಖರೀದಿ ಕೇಂದ್ರ ಮಾಡುವುದರ ಮೂಲಕ ಪ್ರತಿ ಕ್ವಿಂಟಲ್ ಗೆ 4000 ಬೆಂಬಲ ಬೆಲೆ ನೀಡಬೇಕೆಂದು. ಈ ಬೃಹತ್ ಪ್ರತಿಭಟನೆ ಕರೆ ಕೊಟ್ಟರು ಸಹ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಇನ್ನೂ ಮುಂದಿನ ದಿನಗಳಲ್ಲಿ ಇದು ಆಗಬಾರದು ಇವತ್ತಿನ ಪ್ರತಿಭಟನೆಯಲ್ಲಿ ನಮ್ಮ ಬೇಡಿಕೆ ಈಡೇರದೆ ಹೋದರೆ ಮುಂದಿನ ರಾಜ್ಯದಾದ್ಯಂತ ಹೋರಾಟ ಮಾಡ ಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಎನ್.ಎಂ ಸಿದ್ದೇಶ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾದ ಆರ್ ಬಸವರಾಜ್ ಮತ್ತಿತರರು ಸರ್ಕಾರಕ್ಕೆ ಎಚ್ಚರ ವಹಿಸುವುದರ ಮೂಲಕ ಉಪ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಕರಡಿ ಶಾಂತಕುಮಾರ್, ಜಿಲ್ಲಾಧ್ಯಕ್ಷರಾದ ಕೊಚಾಲಿ ಮಂಜುನಾಥ್, ತಾಲೂಕು ಅಧ್ಯಕ್ಷರಾದ ಯು ಉಮೇಶ್, ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಸಹಕಾರದರ್ಶಿಗಳಾದ ಚಿಗಟೇರಿ ಜಯಪ್ಪ, ಕಾರ್ಯದರ್ಶಿಗಳಾದ ಗುಡಿಯರ್ ಮಲ್ಲಿಕಾರ್ಜುನ್, ಹೊಸಕೋಡಳ್ಳಿ ರೈತ ಮುಖಂಡರಾದ ಬುಡೇನ್ ಸಾಬ್ ಪರಸಪ್ಪ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

