ಆರ್.ಟಿ.ಓ ಕಚೇರಿಯಲ್ಲಿ – ದಲ್ಲಾಳಿಗಳ ದರ್ಬಾರ್…. !!!
ಉಡುಪಿ ಆ.26

ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಯಲ್ಲಿ ದಲ್ಲಾಳಿಗಳ (ಬ್ರೋಕರ್‌ಗಳ) ಹಾವಳಿ ಮಿತಿ ಮೀರಿದ್ದು, ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿ ಪಡೆಯಲು ಸಾರ್ವಜನಿಕರು ಹರ ಸಾಹಸ ಪಡುವಂತಾಗಿದೆ. ಅಧಿಕಾರಿಗಳು ಮತ್ತು ದಲ್ಲಾಳಿಗಳ ನಡುವಿನ ಅವಿನಾಭಾವ ಸಂಬಂಧವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಮಾಹಿತಿ ನೀಡದ ಅಧಿಕಾರಿಗಳು….
ಇತ್ತೀಚಿಗೆ ಸರ್ಕಾರದಿಂದ ಸಾರಿಗೆ ಇಲಾಖೆಯ ಸೇವೆಗಳು ಬಹಳಷ್ಟು ಸರಳೀಕರಣ ಗೊಂಡಿದ್ದು, ಆರ್.ಟಿ.ಓ ಅಧಿಕಾರಿಗಳು ಇವರ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ ಸಾರ್ವಜನಿಕರನ್ನು ಕತ್ತಲೆಯಲ್ಲಿಟ್ಟು ವಸೂಲಿ ದಂಧೆ ನಡೆಸುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.ಉಡುಪಿ ಲೋಕಾಯುಕ್ತ ಪೋಲೀಸರ ಕರ್ತವ್ಯ ನಿರ್ಲಕ್ಷ್ಯ…. ಉಡುಪಿ ಜಿಲ್ಲೆಯ ಇತಿಹಾಸದಲ್ಲಿ ಐ.ಎ.ಎಸ್, ಐ.ಪಿ.ಎಸ್, ಐ.ಆರ್.ಎಸ್, ಐ.ಎಫ್,ಎಸ್ ಅಧಿಕಾರಿಗಳು, ಲೋಕೋಪಯೋಗಿ, ನೀರಾವರಿ, ಪಿ.ಆರ್.ಇ.ಡಿ, ಅಬಕಾರಿ, ಆರ್.ಟಿ.ಓ ಸಬ್.ರಿಜಿಸ್ಟ್ರಾರ್, ಗಣಿ & ಭೂ ವಿಜ್ಞಾನ, ಪೋಲೀಸ್ ಇಲಾಖೆಯ ಕಛೇರಿಗಳಿಗೆ ದಾಳಿ ಮಾಡಿದ ಉದಾಹರಣೆಗಳಿಲ್ಲಾ ಎಂಬುದಾಗಿ ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಜನ ಸ್ಪಂದನ ಸಭೆಗಳು ಮತ್ತು ಗ್ರಾಮ ಸಭೆಗಳಲ್ಲಿ ಆರ್.ಟಿ.ಓ ಅಧಿಕಾರಿಗಳು ಭಾಗವಹಿಸಿ, ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರೆ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬಹುದು.
ಆದರೆ, ಅಧಿಕಾರಿಗಳು ಈ ರೀತಿ ಜಾಗೃತಿ ಮೂಡಿಸಲು ಮುಂದಾಗದಿರುವುದು ಅವರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ ಎಂದು ಜನ ಸಾಮಾನ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಉಡುಪಿ ಲೋಕಾಯುಕ್ತ ಪೋಲೀಸರ ವಿರುದ್ಧವೂ ಸಾರ್ವಜನಿಕರ ಆಕ್ರೋಶ….ಆರ್.ಟಿ.ಓ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದರೂ ಉಡುಪಿ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲಾ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆರ್.ಟಿ.ಓ ಇಲಾಖೆಯಲ್ಲಿನ ತಮ್ಮ ಆಪ್ತ ಸಿಬ್ಬಂದಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿ ನಾಮಕಾವಸ್ಥೆಗೆ ಭೇಟಿ ನೀಡಿ ವಾಪಸ್ ಆಗುತ್ತಾರೆ. ಎಂಬುದಾಗಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಉಡುಪಿ ಲೋಕಾಯುಕ್ತ ಪೋಲೀಸರ ಕುರಿತು ಮತ್ತಷ್ಟು ವರದಿ ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದಲ್ಲಿ ನಿರೀಕ್ಷಿಸಿ!!!
ವರದಿ:ಆರತಿ.ಗಿಳಿಯಾರು ಉಡುಪಿ.