“ಅಷ್ಟ ಸಿದ್ಧಿಗಳ ಒಡೆಯ”…..

ಮೋದಕ, ಬೂಂದಿ, ಲಡ್ಡು ಪ್ರಿಯನು
ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕನು
ಮಂಗಳ ಪೂಜೆಯ ಪಡೆಯುವ ಬೆನಕನು
ಸದಾ ನಮ್ಮನ್ನು ಕಾಪಾಡುವ ಗಣೇಶನು
ತಂದೆಯಾದ ಶಿವನಿಂದ ಆಶಿರ್ವದಿಸಲ್ಪಟ್ಟ
ಗಣೇಶನು
ಪಾರ್ವತಿ ದೇವಿಯ ಪ್ರೀತಿಯ ಪುತ್ರನು
ಬಲಿಷ್ಟರಾದ ವಿಘ್ನಗಣಗಳನ್ನು ಸೃಷ್ಟಿಸಿದನು
ಭಾದ್ರಪದ ಮಾಸ ಚೌತಿಯ ದಿನ ಗಣೇಶ
ಆಗಮಿಸುವನು
ಹುಟ್ಟುವಾಗಲೇ ಆನೆಯ ಮುಖವನ್ನು
ಹೊಂದಿದ್ದನು
ಪ್ರಮುಖ ದೇವತೆಗಳಲ್ಲಿ ಅಗ್ರಜ ಸ್ಥಾನ
ವಿನಾಯಕನು
ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಆಶೀರ್ವಾದ
ಪಡೆದವನು
ಎಲ್ಲ ವಿಘ್ನಗಳನ್ನು ನಿವಾರಿಸುವ ವಿಘ್ನೇಶ್ವರನು
ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕರುಣಿಸಲಿ
ಸಕಲ ಐಶ್ವರ್ಯ ಆರೋಗ್ಯ ನೀಡಿ ಹರಸಲಿ
ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ
ಗಣೇಶ ಚತುರ್ಥಿಯ ಶುಭಾಶಯಗಳು
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ/9980180487