ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ – ಗಣೇಶನ ಅದ್ದೂರಿ ಸ್ವಾಗತಿಸಿದರು.
ಗೊರಬಾಳ ಆ.27





ಇಳಕಲ್ಲ ತಾಲೂಕಿನ ಸಮೀಪದ ಗೊರಬಾಳ ಸಿದ್ದಿ ವಿನಾಯಕ ಗೆಳೆಯರ ಬಳಗದ ಯುವಕರು ಮಾಡಿದ್ದ ನಮ್ಮ ಓಣೆಯ ಗಣಪತಿ ಚಂದ ಡಿ.ಜೆ ಹಚ್ಚಿ ಮೆರಿಸೋಣ ಮುಂದ. ಎಲ್ಲಾರು ಒಂದೇ ಕಲರ್ ಅಂಗಿ ತಂದ ಎಂಬ ಸಾಂಗ್ ಮೂಲಕ ರಾಜ್ಯದಾದ್ಯಂತ ವೈರಲ್ ಆಗಿದ್ದ ಗೊರಬಾಳದ ಸಿದ್ಧಿ ವಿನಾಯಕ ಗೆಳೆಯರ ಬಳಗದ ಯುವಕರು ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಅದ್ದೂರಿ ಸ್ವಾಗತಿಸಿದರು. ನಂತರ ಅದೇ ಜೆಸಿಬಿ ಮೂಲಕ ವಿವೇಕಾನಂದ ತರುಣ ಸಂಘದ ಯುವಕರು ಪುಷ್ಪಾರ್ಚನೆ ಮಾಡಿ ಗಣೇಶನನ್ನು ಗ್ರಾಮಕ್ಕೆ ಬರಮಾಡಿ ಕೊಂಡರು.

ಗೊರಬಾಳ ಗ್ರಾಮದಲ್ಲಿ ಬೆಳಗ್ಗೆ ಯಿಂದ ಮಧ್ಯಾಹ್ನದ ವರೆಗೆ ಯುವಕರು ತಂಡೋಪತಂಡವಾಗಿ ಇಲಕಲ್ಲ ಹಾಗೂ ಮತ್ತು ಸಾಧುರ ತೋಟದಿಂದ ಕಳಸಾ ಡೊಳ್ಳು ಮಜಲು ಟ್ಯಾಕ್ಟರ್ ಸಾಂಗ್ ಗಳೊಂದಿಗೆ ಅದ್ದೂರಿಯಾಗಿ ಡ್ಯಾನ್ಸ್ ಮಾಡುತ್ತಾ ಗಣೇಶನನ್ನು ವಿವಿಧ ಮೆರವಣಿಗೆಗಳ ಮೂಲಕ ಗೊರಬಾಳದ ವರೆಗೆ ಬರಮಾಡಿ ಕೊಂಡು ಗಣೇಶನು ಊರನ್ನು ಪ್ರವೇಶಿಸುತ್ತಿದ್ದಂತೆಯೇ ಜೆ.ಸಿ.ಬಿ ಮೂಲಕ ಪುಷ್ಪಾರ್ಚನೆ ಮಾಡಿ ವಿಭಿನ್ನ ಶೈಲಿಯಲ್ಲಿ ಗಣೇಶನನ್ನು ಬರಮಾಡಿ ಕೊಂಡಿದ್ದ ಯುವಕರ ಖುಷಿ ಮುಗಿಲು ಮುಟ್ಟಿತ್ತು ನಂತರ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕಾರ್ಯಗಳಲ್ಲಿ ಪಾಲ್ಗೊಂಡು ಗಣೇಶನನ್ನು ಅದ್ದೂರಿಯಾಗಿ ಮೆರವಣಿಗೆ ಯೊಂದಿಗೆ ಗ್ರಾಮಕ್ಕೆ ಬರಮಾಡಿ ಕೊಂಡಿದ್ದು ಗ್ರಾಮದ ಜನ ನೋಡಿದ ಖುಷಿ ಕಣ್ತುಂಬಿ ಕೊಂಡರು.

ಸಿದ್ಧಿ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಮಹಾಂತೇಶ ಪೂಜಾರಿ ಮಾತನಾಡಿ ಗೊರಬಾಳದಲ್ಲಿ ಪ್ರತಿ ವರ್ಷ ವಿವಿಧ ಯುವಕರ ಗುಂಪುಗಳು ವಿನಾಯಕನ ಪ್ರತಿಷ್ಠಾಪನೆಯನ್ನು ಅದ್ದೂರಿಯಾಗಿ ಮಾಡುತ್ತಾ ಬಂದಿದ್ದು ಈ ವರ್ಷವೂ ಅದ್ದೂರಿಯಾಗಿ ಮಾಡುವುದರ ಜೊತೆಗೆ ಜೆ.ಸಿ.ಬಿ ಮೂಲಕ ಪುಷ್ಪಾರ್ಚನೆ ಮಾಡಿ ಗಣೇಶನನ್ನು ಸ್ವಾಗತಿಸಿದ್ದು ಗ್ರಾಮದ ಎಲ್ಲರಿಗೆ ಖುಷಿ ತಂದಿದೆ ಹಾಗೂ ಸತತ ಐದು ದಿನಗಳ ಕಾಲ ಗೊರಬಾಳ ಗ್ರಾಮದಲ್ಲಿ ವಿವಿಧ ಕಡೆ ಗಣೇಶನ ಪ್ರಸಾದ ವ್ಯವಸ್ಥೆ ಇದ್ದು ಗಣೇಶನ ಎಲ್ಲಾ ಭಕ್ತರು ಪ್ರಸಾದವನ್ನು ಸ್ವೀಕರಿಸಿ ಕೊಂಡು ಹೋಗಬೇಕು ಎಂದು ತಿಳಿಸಿದರು.
ಹವ್ಯಾಸಿ ಬರಹಗಾರರು:ಜಗದೀಶ್.ಗಿರಡ್ಡಿ.ಗೊರಬಾಳ