ಇತಿಹಾಸ ಮರುಕಳಿಸಲು ಚಿಂತನೆ ಪಾಟೀಲ.
ರೋಣ ಡಿ.05

2014 ರಲ್ಲಿ ರೋಣದಲ್ಲಿ ನಡೆದ ಮಾದರಿಯಲ್ಲಿಯೇ ಡಿ.15 ರಂದು ನಡೆಯುವ ಅಭಿವೃದ್ಧಿ ಕಾರ್ಯಕ್ರಮಗಳ ಸಮಾವೇಶ ನಡೆಯಬೇಕು ಎಂಬ ದೃಷ್ಟಿಯಲ್ಲಿ ಶಾಸಕ ಜಿ.ಎಸ್ ಪಾಟೀಲ ಕಾರ್ಯಕ್ರಮ ನಡೆಯುವ ಸ್ಥಳವನ್ನು ಬುಧವಾರ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದಲ್ಬದಾಮಿ ರಸ್ತೆಯಲ್ಲಿರುವ ಗಿರಡ್ಡಿ ಕಾಲೇಜಿನ ಬೃಹತ್ ಅವರಣಕ್ಕೆ ಭೇಟಿ ನೀಡಿ ಬೃಹತ್ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಸಮಾವೇಶ ನಡೆಸಲು ಸೂಚಿಸಿದರು. ರೋಣ ಪಟ್ಟಣದಲ್ಲಿ ಈ ಹಿಂದೆ ಆರ್ಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಫೆ 2014 ರಲ್ಲಿ ಗದಗ ಜಿಲ್ಲಾ 6 ನೇ. ಕನ್ನಡ ಸಾಹಿತ್ಯ ಸಮ್ಮೇಳನ ಜರಗಿದ್ದು, ಆ ಸಂದರ್ಭದಲ್ಲಿ ಸಿದ್ದರಾಮಯ್ಯನ ಮುಖ್ಯಮಂತ್ರಿಗಳಾಗಿದ್ದು ರೋಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮ್ಮೇಳನ ಉದ್ಘಾಟಿಸಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನ ಅಖೀಲ ಭಾರತ ಸಾಹಿತ್ಯ ಸಮ್ಮೇಳನಂತೆ ಅದ್ದೂರಿಯಾಗಿ ಜರುಗಿತ್ತು. ಹೀಗಾಗಿ ಇದೇ ಮಾದರಿಯಲ್ಲಿ ಈ ಕಾರ್ಯಕ್ರಮವೂ ನಡೆಯಬೇಕೆಂಬ ಉದ್ದೇಶವನ್ನು ಹೊಂದಲಾಗಿದೆ ಎಂದು ಈ ವೇಳೆ ತಿಳಿಸಿದರು. ಪುರಸಭೆ ಸದಸ್ಯ ಸಂಗನಗೌಡ ಪಾಟೀಲ, ವಿ.ಬಿ ಸೋಮನಕಟ್ಟಿಮಠ, ಯೂಸುಷ್ ಇಟಗಿ, ಆನಂದ ಚಂಗಳಿ, ಅಭಿಷೇಕ ನವಲಗುಂದ, ಸಲೀಂ ಕುರ್ತಕೋಟಿ, ಮಲೀಕ ಯಲಿಗಾರ, ಸೋಮು ನಾಗರಾಜ, ಕುಮಾರ ಗೌಡನ್ನವರ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್. ವಿ ಸಂಕನಗೌಡ್ರ ರೋಣ

