“ಗೌರಿ ಗಣೇಶ ಹಬ್ಬದ ನೆನಪುಗಳು ಹೇಗಿದ್ದರೆ ಚೆನ್ನ”…..?

ನಮ್ಮೆಲ್ಲರ ನೆಚ್ಚಿನ ಗೌರಿ ಗಣೇಶ ಹಬ್ಬ ಪ್ರತಿ
ವರ್ಷದಂತೆ
ಈ ವರ್ಷವುವು. ಬಂದಿದೆ. ಆದರೆ ಪ್ರತಿ
ವರುಷವು ಒಂದೊಂದು
ವರುಷದ ಹರುಷ ಸಂಭ್ರಮ ಬೇರೆ ಬೇರೆಯಾಗಿ
ನೆನಪಿನ
ಸುರುಳಿಯಲ್ಲಿ ತನ್ನದೇ ಆದಂತಹ
ವಿಶೇಷತೆಯ ಛಾಪನ್ನು
ಬಿಟ್ಟಿರುತ್ತದೆ. ಕೆಲವರಿಗೆ ಅದೇನು ಹಬ್ಬ ಪ್ರತಿ
ವರುಷದಂತೆ
ಈ ವರುಷವು ಬಂದಿದೆ ಅನಿಸಿದರೆ, ಕೆಲವರಿಗೆ
ಅಯ್ಯೋ
ವರುಷಕ್ಕೆ ಒಂದೇ ಸಲ ಈ ಹಬ್ಬ ಬರುವುದು
ಎನಿಸುತ್ತದೆ.
ಹೀಗೆ ಒಂದಷ್ಟು ಹಬ್ಬಗಳ ನೆನಪಿನ
ಬುತ್ತಿಯನ್ನು ಹಂಚಿ
ಕೊಳ್ಳುವ ಅಂದುಕೊಂಡಾಗ ಹೊಳೆದ ಕೆಲವು
ಮಾಹಿತಿಗಳು.
ಚಿಕ್ಕವರಿದ್ದಾಗ ಸಂಸಾರದ ಹೊಣೆ
ಭಾರ ಯಾವ
ಗೋಜು ಇಲ್ಲದೆ ಆಚರಿಸುತ್ತಿದ್ದ ಸಂಭ್ರಮ.
ಗೌರಿ ಹಬ್ಬಕ್ಕೆ ಮನೆಯ ಮುಂದೆ ರಂಗೋಲಿ
ಬಿಡುವುದರಿಂದ ಕೈಗೆ ಸೇವಂತಿಗೆ ಹೂವಿನ
ದಾರ ಕಟ್ಟಿಕೊಳ್ಳುವುದರಿಂದ ಹಬ್ಬದ
ವಾತಾವರಣ ನೆನಪುಗಳ ಮಾಲೆ ಕಟ್ಟಲು
ಆರಂಭಿಸಿ. ಕೂಡು ಕುಟುಂಬದ ಬಾಂಧವ್ಯ
ಜೀವನದಿಂದ ಮಾಸಿದರು ನೆನಪಿನಿಂದ
ಮಾಸದೆ ಉಳಿದ ಹಳ್ಳಿಯ ಮಣ್ಣಿನಿಂದ
ಹಬ್ಬ ಇನ್ನು ತಿಂಗಳು ಇರುವಾಗಲೇ ಶಾಲೆ
ಮುಗಿದ ಮೇಲೆ
ಊರಿನ ಎಲ್ಲಾ ಮಕ್ಕಳ ಆದ್ಯತೆ ಸಮಯ
ಎಂದರೆ ಅದು
ಗಣೇಶನನ್ನು ಈ ಸಲ ಹೋದ ಭಾರಿಗಿಂತ
ನಾನು ಈ ಭಾರಿ
ಚನ್ನಾಗಿ ಮಾಡಿ ಎಲ್ಲರ ಮೆಚ್ಚುಗೆ ಪಡೀಬೇಕು
ಅಂತ ಕನಸು ನನಸು ಅದೇ ಧ್ಯಾನ. ಮಣ್ಣು
ತರೋದು ಕಲಸಿ ಗಣಪತಿ
ಮಾಡೋದು ಮಾಡಿ ಎರಡು ದಿನ ಆದಮೇಲೆ
ಅದು ಬಿರುಕು
ಬಿಟ್ಟು, ಗಣಪತಿ ಮೈ ತುಂಬ ಬಿರುಕು. ಅದು
ಕಾಣಬಾರದು ಅಂತ ಹಠ ಮಾಡಿ ಪೇಟೆಯಿಂದ
ಬಣ್ಣದ ಡಬ್ಬಿ ತರಿಸಿಕೊಳ್ಳೋದಕ್ಕೆ ಏನೇನು
ಪ್ಲಾನ್ ಮಾಡಬಹುದು ಅಂತೆಲ್ಲ
ಚರ್ಚಾ ಸ್ಪರ್ಧೆಗಳೆಲ್ಲ ನಡೆಸಿ ಕೊನೆಗೆ ಯಾರ
ಮನೇಲಿ ಹಠ
ಮಾಡಿದರೆ ನಡೆಯುತ್ತಿದೆ ಅಂತ ತೀರ್ಮಾನ
ಮಾಡಿ ಅವರಿಗೆ
ಪೆಯಿಂಟ್ ತರುವ ಜವಾಬ್ದಾರಿ ಕೊಟ್ಟು.
ಆಮೇಲೆ ಅದರ
ಫಾಲೋ ಅಪ್ಗೆ ಅಂತ ನಿಮ್ಮ ಮನೇಲಿ
ಏನಂದ್ರು ತರುತ್ತಾರಂತ
ಇಲ್ವಂತ ಅಂತ ಪೆಯಿಂಟ್ ಕೈ ಸೇರುವ ಬಗ್ಗೆ
ಮೀಟಿಂಗ್.
ಆಕಸ್ಮಾತ್ ಪ್ಲಾನ್ ಒಂದು ವರ್ಷ ವರ್ಕ್ ಔಟ್
ಆಯ್ತು
ಅಂದ್ರೆ ಅದು ಮುಂದಿನ ವರ್ಷ ಮತ್ತೆ ಗುಲಾಬಿ
ಬಣ್ಣಕ್ಕೆ
ಮತ್ತೆ ಎರಡು ಬಣ್ಣ ತಲೆಗೆ ಯಾವ ಬಣ್ಣ,
ಗಣಪತಿ ಹೊಟ್ಟೆ
ನಲ್ಲಿ ಇರುವ ಹಾವಿಗೆ ಯಾವ ಬಣ್ಣ, ಇಲಿಗೆ
ಯಾವ ಬಣ್ಣ
ಹಚ್ಚಬೇಕು ಅಂತ ಚರ್ಚೆ. ಹೆಣ್ಮಕ್ಳುಳು
ಗಣಪತಿ ಹಿಡ�

ಶ್ರೀಮತಿ ಶೈಲಜಾ ಬಾಬು ಚಿತ್ರದುರ್ಗ

