“ಪ್ರಥಮ ಪೂಜೆ ಅಧಿಪತಿಓಂ ಶ್ರೀ ಗಂ ಗಣಪತಿಯೇ ನಮಃ”…..

ಭಾದ್ರಪದ ಶುಕ್ಲಪಕ್ಷ ಚೌವತಿಯಂದು




ಭೂಮಿಗೆ ಬಂದ ಗಣಪತಿ
ಶಿವ ಪಾರ್ವತಿ ಅಚ್ಚು ಮೆಚ್ಚಿನ ಸುಪುತ್ರ
ಸರ್ವ ಕಾರ್ಯೇಷು ಸರ್ವದಾ
ಪ್ರಥಮ ಪೂಜಿತ ಲಂಬೋದರ
ಜಗದಿ ವಿದ್ಯಾಬುದ್ದಿ ರಿದ್ದಿ ಸಿದ್ಧಿ ತಂದ ಸನ್ಮತಿ
ಶ್ರೀಗೌರಿ ಪ್ರೀತಿಯ ಕಂದ ಗಣಾದೀಶ
ವಿಶ್ವದಿ ಸರ್ವಜನ ಹಿತ ತಂದ ವರ
ಸಿದ್ಧವಿನಾಯಕ
ಮೂಷಿಕ ಸವಾರಿ ಮಕ್ಕಳ ನಲಿವಿಗೆ ಹರುಷವ
ತಂದ
ಗರಕೆ ಹೂವು ಹಣ್ಣು ಕಾಯಿ ಕರ್ಪೂರ
ಅಲಂಕಾರ ಭೂಷಿತ
ತಾಯಿ ತಂದೆ ಸುತ್ತಿ ಹೆತ್ತವರಿಗೆ ವಿಶ್ಶದಿ ಗೌರವ
ತಂದನು
ಯುಗ ಯುಗ ಕಳೆದರೂ ನಲಿಯುವ
ಹರುಷವ ತರುವ ಜನಕೆಲ್ಲಾ ಗಣಪತಿ ಹಬ್ಬ
ಜಗದ ಜನರ ಆನಂದೋತ್ಸವ
ಗಣೇಶನ ನೆನೆಯುವ
ಅನವರತ ಶುಭ ಘಳಿಗೆ ಪಡೆಯುವರು
ಪ್ರಥಮ ಪೂಜೆ ಅಧಿಪತಿ
ಓಂ ಶ್ರೀ ಗಂ ಗಣಪತಿಯೇ ನಮಃ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ