ನೀತಿ ತತ್ವಗಳ ಅನುಸರಣೆ ಯಿಂದ ಮಕ್ಕಳ ಭವಿಷ್ಯ ಉಜ್ವಲ – ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್ ಅಭಿಮತ.
ಚಳ್ಳಕೆರೆ ಆ.28

ನೀತಿ ಕಥೆಗಳಲ್ಲಿರುವ ಮೌಲ್ಯಗಳ ಅನುಸರಣೆ ಯಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ಶಿಕ್ಷಕಿ ಶ್ರೀಮತಿ ಸಿ.ಎಸ್ ಭಾರತಿ ಚಂದ್ರಶೇಖರ್ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಕಥೆಗಳಿಂದ ಕಲಿಯೋಣ ತಿಳಿಯೋಣ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಎರಡು ಕಥೆಗಳನ್ನು ಹೇಳಿದರು.

ಈ ಶಿಬಿರದ ಪ್ರಯುಕ್ತ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಆಟಗಳನ್ನು ಶ್ರೀಮತಿ ಸುಧಾಮಣಿ ಆಡಿಸಿದರು.

ತರಗತಿಯಲ್ಲಿ ಹೂವಿನ ಲಕ್ಷ್ಮೀದೇವಮ್ಮ, ವೆಂಕಟಲಕ್ಷ್ಮೀ, ಸಂತೋಷ್, ಪುಷ್ಪಲತಾ, ಹರ್ಷಿತಾ, ಪ್ರತೀಕ್ಷಾ, ಯಶಸ್ವಿ, ಯುಕ್ತ, ಸಾಯಿ ಸಮರ್ಥ್, ಶಶಾಂಕ್, ವಿವಿಕ್ತ, ವಿಷ್ಣು, ಶ್ರೇಯಸ್ಸು, ವಿನತಿ, ಅಕ್ಷತಾ, ಲಕ್ಷ್ಮೀಕಾಂತ, ವೇದಮೂರ್ತಿ, ವೀರೇಶ್, ಶ್ರೀನಿಹಾಂತ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

