ಕಡಣಿ ಕ್ರಾಸ್ ನಿಂದ ಎರಡು ಕೀಲೋ ಮೀಟರ್ ರಸ್ತೆ ಸಂಚಾರಕ್ಕೆ – ಅಸ್ತವ್ಯಸ್ತ ಕ್ರಮಕ್ಕೆ ಗ್ರಾಮಸ್ಥರಿಂದ ಆಗ್ರಹ.
ತಾರಾಪುರ ಆ.28






ಈ ರಸ್ತೆಯಲ್ಲಿ ಬ್ರೇಕ್ ಡ್ಯಾನ್ಸ್ ಮಾಡುತ್ತಿರುವ ಕಾರ್ & ಕ್ರೂಸರ್, ಇದರ ಮೇಲೆ ವಾಹನ ಸವಾರರ ಕಥೆ ಅಷ್ಟೇ…..
ಆಲಮೇಲ ತಾಲೂಕಿನ ತಾರಾಪುರ ಹಾಗೂ ಹೊಸ ತಾವರಕೇಡ ಗ್ರಾಮಕ್ಕೆ ಹೋಗುವ ಆಲಮೇಲ ಕಡಣಿ ಕ್ರಾಸ್ ನಿಂದ ಎರಡು ಕಿಲೋ ಮೀಟರ್ ವಾಹನ ಸಂಚಾರಕ್ಕೆ ಕೆಸರು ಗದ್ದೆಯಲ್ಲಿ ಹೋಗುವಂತೆ ಹರ ಸಾಹಸ ಪಡುವಂತಾ ಪರಿಸ್ಥಿತಿ ಬಂದಿದೆ. ದಿನಾಲು ತಾರಾಪೂರ ಮತ್ತು ಹೊಸ ತಾವರಕೇಡ ಗ್ರಾಮಸ್ಥರು ಆಲಮೇಲ ಪಟ್ಟಣಕ್ಕೆ ಮತ್ತು ಕೆ.ಪಿ.ಆರ್ ಸಕ್ಕರೆ ಕಾರ್ಖಾನೆಗೆ ಹಾಗೂ ಕಡಣಿ ಗ್ರಾಮಕ್ಕೆ ವ್ಯಾಪಾರಕ್ಕೆ ಹಾಗೂ ಕೆಲಸದ ನಿಮಿತ್ಯ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಹೋಗಲು ಬಹಳ ತೊಂದರೆ ಯಾಗುತ್ತಿದ್ದು. ಕ್ರಾಸ್ ನಿಂದ ತಾರಾಪುರ ಗ್ರಾಮಕ್ಕೆ ಹಾಗೂ ಹೊಸ ತಾವರೆಖೇಡ ಗ್ರಾಮಗಳಿಗೆ ಬಸ್ ಬರುವುದಕ್ಕೆ ಚಾಲಕರು ರಸ್ತೆ ಸರಿ ಇಲ್ಲದ ಕಾರಣ ನಿರಾಕರಿಸುತ್ತಿದ್ದು.

ತೀಕ್ಷ್ಣವಾಗಿ ಗಮನಿಸಿ ಇಲ್ಲಾಂದ್ರೆ ಮುಂದೈತಿ ಮಾರಿ ಹಬ್ಬ, Be careful maind it…..
ಹಾಗೂ ಬೈಕ್ ಸವಾರರು ಮತ್ತು ವಾಹನ ಚಾಲಕರು ಅಧಿಕಾರಿಗಳಿಗೂ ಶಾಸಕರಿಗೂ ಹಿಡಿ ಶಾಪ ಹಾಕುತ್ತಾ ಓಡಾಡುವಂತ ಪರಸ್ಥಿತಿ ಬಂದು ಒದಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ಹರಿಸಿ ಕೂಡಲೇ ಮರುಮ್ ಹಾಕಿ ಸಂಚಾರಕ್ಕೆ ಅನುವು ಮಾಡಿ ಕೊಡುಬೇಕೆಂದು ಹೊಸ ತಾವರಖೇಡದ ಹಾಗೂ ತಾರಾಪುರ ಗ್ರಾಮಸ್ಥರು ಈ ಮೂಲಕ ಆಗ್ರಹಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ