ಸಾಲ ಬಾಧೆ ತಾಳಲಾರದೆ ರೈತ ಯುವಕನ್ನೋರ್ವ ಆತ್ಮಹತ್ಯೆ.
ಹುನಗುಂದ ಜನೇವರಿ.28





ಸಾಲದ ಬಾಧೆಯನ್ನು ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ರೈತ ಯುವಕನೋರ್ವ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಹುನಗುಂದ ಹೊರವಲಯದ ಜಮೀನೊಂದರಲ್ಲಿ ಕಂಡು ಬಂದಿದೆ.ಮೃತ ವ್ಯಕ್ತಿ ಹುನಗುಂದ ಪಟ್ಟಣದ ಮೇಗಲಪೇಟಿ ನಿವಾಸಿ ಬಸವರಾಜ ಭೀಮಪ್ಪ ಕುರಿ (26) ಆತ್ಮಹತ್ಯೆ ಶರಣಾದ ದುರ್ದೈವಿ ಯಾಗಿದ್ದಾನೆ.ಘಟನೆ ವಿವರ-ಹುನಗುಂದ ಪಟ್ಟಣದ ಮೇಗಲಪೇಟಿ ಬಡವಾಣೆಯ ನಿವಾಸಿ ಬಸವರಾಜ ಭೀಮಪ್ಪ ಕುರಿ ಎಂಬ ರೈತ ಯುವಕನಿಗೆ ಹುನಗುಂದ ಸರಹದ್ದಿನಲ್ಲಿ ತನಗೆ ಸಂಬಂಧಿಸಿದ 2.ಎಕರೆ ಜಮೀನನಲ್ಲಿ ಕೃಷಿ ಕೆಲಸ ಮಾಡಿ ಕೊಂಡಿದ್ದ. ಮೃತನು ತನ್ನ ಜಮೀನನ ಮೇಲೆ ಹುನಗುಂದ ಪಟ್ಟಣದ ಪಿಕೆಪಿಎಸ್‌ನಲ್ಲಿ ಬೆಳೆ ಸಾಲವಾಗಿ 5೦ ಸಾವಿರ,ಅಕ್ಕಮಹಾದೇವಿ ಮಹಿಳಾ ಬ್ಯಾಂಕಿನಲ್ಲಿ ಬಂಗಾರದ ಮೇಲೆ 1.ಲಕ್ಷ ರೂ ಮತ್ತು ಮನೆಯ ಮೇಲೆ 3. ಲಕ್ಷ ರೂ ಸಾಲವನ್ನು ಪಡೆದು ಹೊಲಕ್ಕೆ ಖರ್ಚು ಮಾಡಿ ಮೆಣಶಿನಕಾಯಿ ಬಿತ್ತನೆ ಮಾಡಿದ್ದ.ಮಣಶಿನಕಾಯಿ ಬೆಳೆ ಸರಿಯಾಗಿ ಬಾರದೇ ಇರೋದರಿಂದ ಮಾಡಿದ ಸಾಲವನ್ನು ಹೇಗೆ ತೀರಿಸೋದು ಎಂದು ಮನನೊಂದು ಕೊಂಡು ತನ್ನ ಜಮೀನನಲ್ಲಿರುವ ಬೇವಿನಮರಕ್ಕೆ ನೇಣು ಬೀಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.ಸ್ಥಳಕ್ಕೆ ಹುನಗುಂದ ಪೊಲೀಸ್ ಠಾಣೆಯ ಎಎಸ್‌ಐ ಎಸ್.ಬಿ.ಹೊಸಮನಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ತಾಲೂಕ ವರದಿಗಾರರು:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ