ಗಣೇಶ ಚತುರ್ಥಿ & ಈದ ಮಿಲಾದ್ ಹಬ್ಬದ ಪ್ರಯುಕ್ತ – ಪಥ ಸಂಚಲನ.
ಆಲಮೇಲ ಆ.29





ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಆಲಮೇಲ ಪಟ್ಟಣದಲ್ಲಿ ಗಜಾನನ ಉತ್ಸವ ಮತ್ತು ಈದ ಮಿಲಾದ ಆಚರಣೆ ಶಾಂತಿಯುತವಾಗಿ ಆಚರಿಸಬೇಕೆಂದು ಆಲಮೇಲ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಖೆ ಮತ್ತು IRB ಬಟಾಲಿಯನ್ ಪಡೆ ಸಿಬ್ಬಂದಿಗಳು ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗಳು ಪಥ ಸಂಚಲನ ಮಾಡಿ ಜನರಿಗೆ ಶಾಂತಿಯುತವಾಗಿ ಆಚರಣೆ ಮಾಡುವ ಸಂದೇಶ ನೀಡಿದರು. ಶಾಂತಿ ಸಂದೇಶದ ಪ್ರಭಾತ ಪೇರಿಯಲ್ಲಿ ನಾನಾಗೌಡ ಪೊಲೀಸ್ ಪಾಟೀಲ ಸಿ.ಪಿ.ಐ ಸಿಂದಗಿ, ಅರವಿಂದ್ ಅಂಗಡಿ ಪಿ.ಎಸ್.ಐ ಆಲಮೇಲ, ಎಸ್ ಎಂ ಪಡಶೆಟ್ಟಿ ಕ್ರೈಂ ಪಿ.ಎಸ್.ಐ ಆಲಮೇಲ ಮತ್ತು ಆಲಮೇಲ ಠಾಣೆಯ ಸಿಬ್ಬಂದಿ ವರ್ಗ, ಗೃಹ ರಕ್ಷಕ ದಳ ಸಿಬ್ಬಂದಿ ವರ್ಗ, IRB ಬಟಾಲಿಯನ್ ತಂಡ, ಪಟ್ಟಣದ ಪ್ರಮುಖ ಬೀದಿಯಲ್ಲಿ ಶಾಂತಿ ಕದಡ ದಂತೆ ಪಥ ಸಂಚಲನ ಮುಖಾಂತರ ಜನರಿಗೆ ಕಟ್ಟೆಚ್ಚರಿಕೆ ಸಂದೇಶ ನೀಡಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ