ಗುರು ಸೇವೆಯ ಮೂರ್ತರೂಪ ಸ್ವಾಮಿ ಅದ್ವೈತಾನಂದಜೀ – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ.
ಚಳ್ಳಕೆರೆ ಆ.29





ಗುರು ಸೇವೆಯ ಮೂರ್ತರೂಪ ಸ್ವಾಮಿ ಅದ್ವೈತಾನಂದಜೀ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರು ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜ ನಗರದ ಶ್ರೀಮತಿ ಪ್ರಮೀಳಾ ಜಗದೀಶ್ ಅವರ ಮಾತೃ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ “ಸ್ವಾಮಿ ಅದ್ವೈತಾನಂದಜೀ ಮಹಾರಾಜ”ರ ಜಯಂತ್ಯುತ್ಸವದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸ್ವಾಮಿ ಅದ್ವೈತಾನಂದಜೀ ಅವರ ಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನಾ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್,ರಮಾ ವೇಣುಗೋಪಾಲ್ ಮತ್ತು ಭಾರ್ಗವಿ ಅವರು ನಡೆಸಿಕೊಟ್ಟರೆ ಯತೀಶ್ ಎಂ ಸಿದ್ದಾಪುರ ಅವರಿಂದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಪ್ರಮೀಳಾ ಜಗದೀಶ್,ವಿದ್ಯಾಶ್ರೀ ನವೀನ್ ಕುಮಾರ್,ವಿಕಾಸ್, ವಿಹಾನ್, ಪುಷ್ಪಲತಾ, ಎಂ ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಬಿ.ಟಿ.ಗಂಗಾಂಬಿಕೆ ರವಿ, ಗೀತಾ ಸುಂದರೇಶ್ ದೀಕ್ಷಿತ್, ಗೀತಾ ಕಿರಣ್, ಎಂ ಲಕ್ಷ್ಮೀದೇವಮ್ಮ, ರಾಧಮ್ಮ, ಸರ್ವ ಮಂಗಳ, ಪಂಕಜ ಚೆನ್ನಪ್ಪ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.