ವಿಶ್ವ ಜಾನಪದ ದಿನಾಚರಣೆ ಪ್ರಯುಕ್ತ – ಸಾಧಕರಿಗೆ ಸನ್ಮಾನ ಸಮಾರಂಭ.
ಮುದ್ದೇಬಿಹಾಳ ಆ.29





ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕ ಕನ್ನಡ ಜಾನಪದ ಪರಿಷತ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಗಷ್ಟ 30 ಶನಿವಾರ ದಂದು ವಿಶ್ವ ಜಾನಪದ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಉದ್ಘಾಟಕರಾಗಿ ಮುದ್ದೇಬಿಹಾಳ ತಹಶಿಲ್ದಾರರಾದ ಕೀರ್ತಿ ಚಾಲಕ, ಉಪಸ್ಥಿತರಾದ ನೇತಾಜಿ ನಲವಡೆ, ಉಪನ್ಯಾಸಕರಾಗಿ ಅರವಿಂದ ಕೊಪ್ಪ, ಅಧ್ಯಕ್ಷತೆ ಎಸ್.ಎಸ್ ಅಂಗಡಿ, ಮುಖ್ಯಾತಿಥಿಗಳಾಗಿ ಮಹಿಬೂಬ ಗೊಳಸಂಗಿ, ರಾಯನಗೌಡ ತಾತರೆಡ್ಡಿ, ಖುಬಾಸಿಂಗ್ ಜಾದವ್, ಸತೀಶ ಓಸ್ವಾಲ್, ಗಣೇಶ ಅನ್ನಗೌನಿ, ಬಿ.ಬಿ ವಿಜಯಶಂಕರ, ದಾನಯ್ಯಸ್ವಾಮಿ ಹೀರೆಮಠ, ಅಶೋಕ ನಾಡಗೌಡ, ಎ.ಆರ್ ಮುಲ್ಲಾ, ಮಹಾಂತೇಶ ಬೂದಿಹಾಳಮಠ, ಐ.ಬಿ ಹೀರೆಮಠ ಸಂಯೋಜಕರು ಸಾಂಸ್ಕೃತಿಕ ಘಟಕ ಮುದ್ದೇಬಿಹಾಳ, ಡಾ, ಜಾನಪದ ಎಸ್.ಬಾಲಾಜಿ ರಾಜ್ಯಾಧ್ಯಕ್ಷರು ಕರಾಯು ಸಂ.ಒಕ್ಕೂಟ ಹಾಗೂ ಕ,ಜಾ,ಪ,ಬೆಂಗಳೂರು ಇವರು ಭಾಗವಹಿಸುವವರು. ಇದೇ ವೇಳೆಯಲ್ಲಿ ವಿವಿಧ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಕ,ರಾ,ಯು,ಸಂ ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ಪುಂಡಲೀಕ ಮುರಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು) ಮುದ್ದೇಬಿಹಾಳ