ಸಾಲ ಮರು ಪಾವತಿ ಮಾಡಲು ಆಗದೆ ನೋಟಿಸ್ ಗೆ ಹೆದರಿ – ರೈತ ಆತ್ಮಹತ್ಯೆ.
ದೇವರ ನಾವದಗಿ ಆ.30





ಈ ದೇಶದ ಬೆನ್ನೆಲುಬಾದ ರೈತನಿಗೆ ಸಾಲದ ಬಾಧೆ ಮತ್ತು ವರುಣ ರಾಯನ ಆರ್ಭಟಕ್ಕೆ ಬೆಳೆ ಹಾನಿಯಾಗಿ ಸಾಲ ಮರು ಪಾವತಿ ಮಾಡಲು ಆಗದೆ ರೈತ ಶಂಕ್ರಪ್ಪ ಮಲಕಪ್ಪ ಯರಗಲ ಸಾಲಕ್ಕೆ ಹೆದರಿ ನೇಣಿಗೆ ಶರಣಾಗಿರುವ ಘಟನೆ ಆಲಮೇಲ ತಾಲೂಕಿನ ದೇವರ ನಾವಾದಗಿ ಗ್ರಾಮದಲ್ಲಿ ನಡೆದಿದೆ. ಬಿಟ್ಟು ಬಿಡದೆ ಮಳೆಯಾಗಿ ಬೆಳೆ ಹಾನಿ ಯಾಗಿರುವುದರಿಂದ ಸ್ವಾಭಿಮಾನಿ ರೈತ ಇಂದು ಆತ್ಮಹತ್ಯೆ ಮಾಡಿ ಕೊಳ್ಳುವಂತೆ ಪರಿಸ್ಥಿತಿ ಬಂದು ಒದಗಿದೆ. ಸ್ವಾಭಿಮಾನಿ ರೈತ ಶಂಕ್ರಪ್ಪ ಮಲಕಪ್ಪ ಯರಗಲ್ ಮಲಗಾಣ ಗ್ರಾಮದಲ್ಲಿ ಸ್ವಂತ ಹೊಲದಲ್ಲಿ ಒಕ್ಕಲುತನ ಮಾಡಿ ಕೊಂಡು ಬದುಕು ಸಾಗಿಸುತ್ತಿದ್ದ ಮಕ್ಕಳ ಮದುವೆ ನಿಮಿತ್ಯವಾಗಿ ಹಾಗೂ ಪ್ರಾಪಂಚಿಕ ಆಚರಣೆಗಾಗಿ ಸ್ವಸಾಹಯ ಸಂಘಗಳಲ್ಲಿ ಸಾಲ ಪಡೆದಿದ್ದ ಸಾಲ ಮರು ಪಾವತಿಸಲು ಆಗದೆ ಬ್ಯಾಂಕಿನ ನೋಟಿಸಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲಮೇಲ ತಾಲೂಕಿನ ದೇವರ ನಾವದಗಿ ಗ್ರಾಮದಲ್ಲಿ ನಡೆದಿದೆ. ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು. ಘಟನಾ ಸ್ಥಳಕ್ಕೆ ಕ್ರೈಂ ಪಿ.ಎಸ್.ಐ ಎಸ್.ಎಮ್ ಪಡಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ