ವ್ಯಕ್ತಿಯೋರ್ವನ ಮೇಲೆ ಅನಾಮಧೇಯ ವಾಹನ ಹಾಯ್ದು ಪರಿಣಾಮ – ವ್ಯಕ್ತಿ ಸ್ಥಳದಲ್ಲೇ ಸಾವು.
ತೆಗ್ಗಿ ಹಳ್ಳಿ ಆ.30





ಇಂಡಿ ತಾಲೂಕಿನ ನಾದ ಕೆಡಿ ಹಾಗೂ ತೆಗ್ಗಿ ಹಳ್ಳಿ ಕ್ರಾಸ್ ಸಮೀಪ ಇಂದು ಬೆಳಗ್ಗೆ 06:30 ರ ಸುಮಾರಿಗೆ ತಾಲೂಕೀನ ಲಚ್ಯಾಣ ಗ್ರಾಮದ ಪ್ರವೀಣ ಮುಜಗೊಂಡ ಎಂಬ ವ್ಯಕ್ತಿ ಆಲಮೇಲ ಮಾರ್ಗದಿಂದ ತನ್ನ ಸ್ವಂತ ಗ್ರಾಮವಾದ ಲಚ್ಯಾಣಕ್ಕೆ ದ್ವೀಚಕ್ರ ವಾಹನದ ಮೇಲೆ ಹೋಗುವಾಗ ನಾದ ಕೆಡಿ ಹಾಗೂ ತೆಗ್ಗಿ ಹಳ್ಳಿ ಕ್ರಾಸ್ ಸಮೀಪ ಯಾವುದೋ ಅನಾಮಧೇಯ ವಾಹನವೊಂದು ಈ ವ್ಯಕ್ತಿಯ ಮೇಲೆ ಹಾಯಿಸಿ ವಾಹನ ಸಮೇತ ಪರಾರಿಯಾದ ಘಟನೆಯೊಂದು ನಡೆದಿದೆ.
ಸಾವಿಗೀಡಾದ ವ್ಯಕ್ತಿಯ ತಲೆಬುರುಡೆ ಇಬ್ಭಾಗವಾಗಿದ್ದು. ವ್ಯಕ್ತಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ. ಈ ಘಟನೆಯು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ