ಪರಮ ಪೂಜ್ಯ ಡಾ, ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ – ನೇತೃತ್ವದಲ್ಲಿ ಗುರು ಕೋರಣ್ಯ.
ಕನಕಪುರ ಆ.30






ಪರಮ ಪೂಜ್ಯ ಶ್ರೀ ಡಾ, ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳ ನೇತೃತ್ವದಲ್ಲಿ ಕನಕಪುರ ನಗರದಲ್ಲಿ ಎರಡು ದಿನಗಳ ಕಾಲ ದೇಗುಲ ಮಠದಿಂದ ಗುರು ಕೋರಣ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮ ಪೂಜ್ಯ ಶ್ರೀ ಚನ್ನಬಸವ ಮಹಾ ಸ್ವಾಮಿಗಳು ಹಾಗೂ ತೋಟಹಳ್ಳಿ ಮಠದ ಪೂಜ್ಯ ಶ್ರೀ ಬಸವಪ್ರಭು ಮಹಾ ಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಪೂಜ್ಯ ಶ್ರೀ ಪ್ರಭು ಕಿರೀಟ ಮಹಾ ಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಪೂಜ್ಯ ಶ್ರೀ ನಿರಂಜನ ಮಹಾ ಸ್ವಾಮಿಗಳು ಮತ್ತು ಬಿಲ್ವಪತ್ರೆ ಮಠದ ಇಮ್ಮಡಿ ಸದಾಶಿವ ಮಹಾ ಸ್ವಾಮಿಗಳುಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು.

ಶ್ರೀ ದೇಗುಲ ಮಠದಿಂದ ಭಾದ್ರಪದ ಮಾಸದ ವಾರ್ಷಿಕ ಗುರು ಕೋರಣ್ಯ ಕಾಯಕ ಬಹಳ ಹಿಂದಿನ ಸಂಪ್ರದಾಯ. ಯಾವುದೇ ಮಠವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ, ವಿದ್ಯಾ ದಾಸೋಹ ಮತ್ತು ಜ್ಞಾನ ದಾಸೋಹಗಳನ್ನು ನಿರ್ವಹಿಸಲು ಗುರು ಕೋರಣ್ಯ ಪದ್ಧತಿ ನಡೆದು ಕೊಂಡು ಬಂದಿದ್ದು, ಈ ಪದ್ಧತಿಯನ್ನು ಬಹಳ ಹಿಂದಿ ನಿಂದಲೂ ಶ್ರೀ ದೇಗುಲ ಮಠದ ಗುರು ಪರಂಪರೆ ಅನೂಚಾನವಾಗಿ ನಡೆಸಿ ಕೊಂಡು ಬರುತ್ತಿದೆ.

ವಿಶೇಷವಾಗಿ ಈ ಬಾರಿ ಐದು ಸ್ವಾಮೀಜಿಗಳು ಶ್ರೀ ದೇಗುಲ ಮಠಾಧ್ಯಕ್ಷರಾದ ಡಾ, ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾ ಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ನಡೆದ ಈ ಸಾಂಪ್ರದಾಯಿಕ ಕಾರ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮ ಪೂಜ್ಯ ಶ್ರೀ ಚನ್ನಬಸವ ಮಹಾ ಸ್ವಾಮಿಗಳವರು ಹಾಗೂ ತೋಟಹಳ್ಳಿ ಮಠದ ಶ್ರೀ ಬಸವ ಪ್ರಭು ಮಹಾ ಸ್ವಾಮಿಗಳು ಹಾಗು ಅತ್ತಹಳ್ಳಿ ಮಠದ ಕಿರಿಯ ಶ್ರೀ ನಿರಂಜನ ಮಹಾ ಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಶ್ರೀ ಪ್ರಭು ಕೀರಿಟ ಮಹಾ ಸ್ವಾಮಿಗಳವರು ಮತ್ತು ಬಿಲ್ವಪತ್ರೆ ಮಠ ಶ್ರೀ ಇಮ್ಮಡಿ ಸದಾಶಿವ ಮಹಾ ಸ್ವಾಮಿಗಳು ಗುರು ಕೋರಣ್ಯ ಕಾಯಕವನ್ನು ಕೈಗೊಂಡು ಕನಕಪುರ ನಗರದ ವಿವಿಧ ಬಡಾವಣೆಗಳಾದ ಕೋಟೆ, ಕೆಂಕೆರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ.ಜಿ ರಸ್ತೆ ಮುನಿಸಿಪಲ್ ಹೈಸ್ಕೂಲ್ ರಸ್ತೆ, ಹೀಗೆ ಅನೇಕ ಬಡಾವಣೆಗಳಲ್ಲಿ ಸಂಚರಿಸಿ ಕೋರಣ್ಯ ಮಾಡಿದರು.

ಐವರು ಪೂಜ್ಯರನ್ನೂ ಭಕ್ತ ವೃಂದವು ಅನನ್ಯ ಭಕ್ತಿ ಭಾವದಿಂದ ಬರಮಾಡಿಕೊಡು, ಅವರವರ ಶಕ್ತಿಯ ಅನುಸಾರ ಕಾಣಿಕೆ ದವಸ ಧಾನ್ಯಗಳು, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ ಯಥಾಶಕ್ತಿ ಕಾಣಿಕೆಗಳನ್ನೂ ಸಮರ್ಪಿಸಿ ಶ್ರಿಗಳವರನ್ನು ಸತ್ಕರಿಸಿದರು. ಜೊತೆಗೆ ಭಜನೆ, ತಂಡಗಳು ಮುಚೂಣಯಲ್ಲಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಈ ಕಾರ್ಯದಲ್ಲಿ ಕನಕಪುರದ ನಗರದ ಭಕ್ತರು ಹಳೆ ವಿದ್ಯಾರ್ಥಿಗಳು ಎಲ್ಲಾ ಹಿರಿಯರು, ತರುಣರು, ಶಿಕ್ಷಕರು ಭಕ್ತ ವೃಂದ ಹಾಗು ನೌಕರ ವರ್ಗದವರು ಉಪಸ್ಥಿತರಿದ್ದರು.